Monday, August 8, 2022

Latest Posts

ಸುಗ್ರೀವಾಜ್ಞೆ ಕರಡಿಗೆ ಯೋಗಿ ಸಂಪುಟ ಅಸ್ತು: ಗೋವುಗಳ ಹತ್ಯೆ ತಡೆಗೆ ಸುಗ್ರೀವಾಜ್ಞೆ

ಹೊಸದಿಲ್ಲಿ: ಗೋ ಹತ್ಯೆ ತಡೆಯಲು ಹಾಗೂ ಗೋ ಸಂರಕ್ಷಣೆಗಾಗಿ ಉತ್ತರ ಪ್ರದೇಶ ಸಂಪುಟವು ಗೋ ಹತ್ಯೆಗೆ ಕನಿಷ್ಠ 10 ವರ್ಷಗಳ ಸೆರೆವಾಸ ಹಾಗೂ 5 ಲಕ್ಷ ರೂ. ದಂಡ ವಿಧಿಸುವ ಸುಗ್ರೀವಾಜ್ಞೆಯ ಕರಡಿಗೆ ಒಪ್ಪಿಗೆ ನೀಡಿದೆ.

ಮೊದಲ ಬಾರಿಯ ಅಪರಾಧಕ್ಕೆ 1ರಿಂದ 10 ವರ್ಷವರೆಗಿನ ಜೈಲುವಾಸದೊಂದಿಗೆ 1 ಲಕ್ಷದಿಂದ 3 ಲಕ್ಷ ರೂಪಾಯಿಗಳ ತನಕ ದಂಡ ವಿಧಿಸಲಾಗುವುದು ಎಂದು ಹಾಗೂ ಎರಡನೇ ಬಾರಿ ಅಪರಾಧಕ್ಕೆ 10 ವರ್ಷ ಕಠಿಣ ಜೈಲುವಾಸದೊಂದಿಗೆ 5 ಲಕ್ಷ ದಂಡ ವಿಧಿಸಬೇಕೆಂದು ಕರಡಿನಲ್ಲಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದಲ್ಲಿ  ರಾಜ್ಯ ಸಂಪುಟ ಸಭೆ ನಡೆದಿದ್ದು, ಗೋ ಹತ್ಯೆ ತಡೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಲಾಗಿದೆ. ಒಂದು ವೇಳೆ ಗೋ ಕಳ್ಳ ಸಾಗಣೆ ಮಾಡುತ್ತ ಸಿಕ್ಕಿಬಿದ್ದಲ್ಲಿ, ಚಾಲಕನ ಜತೆಗೆ ವಾಹನ ಮಾಲಿಕನಿಗೂ ಸುಗ್ರೀವಾಜ್ಞೆ ಅನ್ವಯ ಶಿಕ್ಷೆ ನೀಡಬೇಕು ಎಂದಿದೆ. ಅದರೆ ಒಂದು ವೇಳೆ ತನ್ನ ಅರಿವೇ ಇಲ್ಲದೆ ತನ್ನ ವಾಹನದಲ್ಲಿ ಗೋ ಸಾಗಣೆ ಮಾಡಲಾಯಿತು ಎಂಬುದನ್ನು ಸಾಬೀತು ಮಾಡಲು ಯಶಸ್ವಿಯಾದರೆ, ಮಾಲೀಕನನ್ನು ಶಿಕ್ಷೆಗೆ ಒಳಪಡಿಸಲಾಗುವುದಿಲ್ಲ. ಕಳ್ಳ ಸಾಗಣೆ  ವೇಳೆ ವಶ ಪಡಿಸಿಕೊಳ್ಳಲಾದ ಹಸು ಹಾಗೂ ಕರುಗಳ ನೋಡಿಕೊಳ್ಳಲು ವಾಹನ ಮಾಲೀಕನೇ ಒಂದು ವರ್ಷ ಅಥವಾ ಹಸುಗಳು ಬಿಡುಗಡೆಯಾಗುವ ತನಕ ಯಾವುದು ಮೊದಲೋ ಅಲ್ಲಿಯ ತನಕ ನೀಡಬೇಕಾಗುತ್ತದೆ. ಅಲ್ಲದೇ ಒಂದು ವೇಳೆ ಹಸುಗಳಿಗೆ ದೈಹಿಕ ಹಿಂಸೆ ನೀಡಿದಲ್ಲಿ ಅದಕ್ಕೂ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಕರಡಿನಲ್ಲಿದೆ. ಯಾರಾದರೂ ಹಸುವಿಗೆ ಆಹಾರ ಹಾಗೂ ನೀರು ನೀಡದೆ, ಅದರ ಜೀವನವನ್ನು ಅಪಾಯಕ್ಕೆ ಸಿಲುಕಿಸಿದ್ದಲ್ಲಿ ಕನಿಷ್ಠ ಒಂದು ವರ್ಷ ಕಠಿಣ ಜೈಲು ವಾಸ ನೀಡಲಾಗುವುದು.

ಈ ಜೈಲುವಾಸ 7 ವರ್ಷದ ತನವೂ ಮುಂದುವರಿಯಬಹುದಾಗಿದ್ದು, ಇದರೊಂದಿಗೆ 1-3 ಲಕ್ಷ ರೂ. ದಂಡವನ್ನೂ ವಿಧಿಸಲಾಗುವುದು ಎಂದು ನೀಡಲಾಗಿದೆ.

1956ರ ಜನವರಿ 6ರಂದು ರಾಜ್ಯದಲ್ಲಿ ಮೊದಲು ಗೋ ಹತ್ಯೆ  ಕಾಯ್ದೆ ಜಾರಿಗೆ ತರಲಾಗಿತ್ತು. ತದನಂತರ 1958,1961,1979 ಹಾಗೂ 2002ರಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಅಲ್ಲದೇ 1964  ಹಾಗೂ 1979ರಲ್ಲಿ ಕಾಯ್ದೆಯ ನಿಯಮಾವಳಿಗೆ ತಿದ್ದುಪಡಿ ತರಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss