Friday, July 1, 2022

Latest Posts

ಸುತ್ತೂರಿನಲ್ಲಿ ಸಂಭ್ರಮ, ಸಡಗರದಿಂದ ನಡೆಯಿತು ‘ರಥೋತ್ಸವ’

ಹೊಸ ದಿಗಂತ ವರದಿ, ಮೈಸೂರು:

ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದಲ್ಲಿ ಬುಧವಾರ ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವ ಸಂಭ್ರಮ, ಸಡಗರದಿಂದ ನಡೆಯಿತು.
ಫೆಬ್ರವರಿ 10ರ ಪ್ರಾತಃಕಾಲ 4 ಗಂಟೆಗೆ ಕರ್ತಗದ್ದುಗೆ, ಮಹದೇಶ್ವರ ಸನ್ನಿಧಿ, ನಂಜುoಡೇಶ್ವರ, ವೀರಭದ್ರೇಶ್ವರ ಮತ್ತು ಸೋಮೇಶ್ವರ ದೇವಸ್ಥಾನಗಳಲ್ಲಿ ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ಪ್ರಾತಃಕಾಲ 5 ಗಂಟೆಗೆ ಶಿವದೀಕ್ಷೆ-ಲಿಂಗದೀಕ್ಷೆ ಜರುಗಿತು. ಬೆಳಗ್ಗೆ 6 ಗಂಟೆಗೆ ಸುತ್ತೂರು ಗ್ರಾಮದ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಜರುಗಿದವು.
6ಕ್ಕೆ ಪ್ರಭಾತ್ ಫೇರಿ, 7.20ಕ್ಕೆ ಕನಕಪುರದ ಶ್ರೀ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳವರಿಂದ ಷಟ್‌ಸ್ಥಲ ಧ್ವಜಾರೋಹಣ ನೆರವೇರಿತು. 7.30ಕ್ಕೆ ಆದಿಜಗದ್ಗುರುಗಳವರ ಉತ್ಸವಮೂರ್ತಿಗೆ ರಾಜೋಪಚಾರ ಮಾಡಲಾಯಿತು. ಬಳಿಕ ಸುತ್ತೂರು ಶ್ರೀಮಠದ ಮುಂದೆ ಬಗೆ, ಬಗೆಯ ಪುಷ್ಪಗಳಿಂದ, ತಳೀರು ತೋರಣಗಳಿಂದ ಅಲಂಕೃತಗೊoಡಿದ್ದ ರಥಗಳಿಗೆ ಬೆಳಗ್ಗೆ 10 ಗಂಟೆಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಬಳಿಕ ಸುತ್ತೂರು ಮಠದ ಪೀಠಾಧ್ಯಕ್ಷರಾದ ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮಿ ಅವರು ರಥವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಅವರಿಗೆ ವಿವಿಧ ಮಠಾಧೀಶರುಗಳು ಸಾಥ್ ನೀಡಿದರು. ಬಳಿಕ ಒಂದು ಸುತ್ತು ಭಕ್ತರು ರಥವನ್ನು ಎಳೆದು ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು.
ನಂದಿಧ್ವಜ, ನಾದಸ್ವರ ಸೇರಿದಂತೆ ಹಲವು ಜಾನಪದ ಕಲಾತಂಡಗಳು ರಥೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಮಧ್ಯಾಹ್ನ 2.35ಕ್ಕೆ ಕಪಿಲಾ ನದಿತೀರದಲ್ಲಿ (ತೆಪ್ಪದಕಡುವು) ಉತ್ಸವಮೂರ್ತಿಗೆ ರುದ್ರಾಭಿಷೇಕ ಮತ್ತು ವಿಶೇಷ ಪೂಜೆಯನ್ನು ನೆರವೇರಿಸಿ ಸಂಜೆ 6.30ಕ್ಕೆ ಉತ್ಸವಮೂರ್ತಿಯನ್ನು ಕರ್ತಗದ್ದುಗೆಯಿಂದ ಶ್ರೀಮಠಕ್ಕೆ ಬಿಜಯಂಗೈಸಲಾಯಿತು. ಜೆಎಸ್‌ಎಸ್ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕತಿ ಕಾರ್ಯಕ್ರಮ ನಡೆಯಿತು. ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ 6 ದಿನಗಳ ಕಾಲ ವಿಜೃಂಭಣೆಯಿ0ದ ಸುತ್ತೂರು ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಆದರೆ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಮಹಾಮಾರಿ ಕೊರೋನಾ ಸೋಂಕು ಹರಡುವಿಕೆಯ ಕಾರಣದಿಂದ ಸುತ್ತೂರು ಜಾತ್ರೆ ಹಾಗೂ ರಥೋತ್ಸವವನ್ನು ಕೇವಲ ಒಂದೊ0ದು ದಿನಕ್ಕೆ ಸೀಮಿತವಾಗಿ ಸರಳವಾಗಿ ನಡೆಸಲಾಗಿದೆ. ಇದು ಜನರಲ್ಲಿ ನಿರಾಸೆಯನ್ನುಂಟು ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss