ಮೈಸೂರು: ಕೋವಿಡ್-೧೯ ಹಿನ್ನೆಲೆಯಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳ ಆಹಾರ ಮತ್ತು ಮೃಗಾಲಯ ನಿರ್ವಹಣೆಗಾಗಿ ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿ ಅವರು, ೫ ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದಾರೆಂದು ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೃಗಾಲಯಕ್ಕೆ ಹರಿದು ಬಂದ ನೆರವು
ಕೋವಿಡ್-೧೯ರ ಲಾಕ್ಡೌನ್ ಅವಧಿಯಲ್ಲಿ ಮೃಗಾಲಯ ನಿರ್ವಹಣಿಗೆ ಕಷ್ಟವಾದ ನಿಟ್ಟಿನಲ್ಲಿ ಹಲವಾರು ಗಣ್ಯರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಮೃಗಾಲಯದ ಪ್ರಾಣಿಗಳನ್ನು ದತ್ತು ಸ್ವೀಕರಿಸುವ ಮೂಲಕ ಮೃಗಾಲಯದ ಕಲ್ಯಾಣಕ್ಕೆ ಸಹಕರಿಸುತ್ತಿದ್ದಾರೆ ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.
ಮೈಸೂರು ಮೃಗಾಲಯದ “ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ” ಅಡಿಯಲ್ಲಿ ಹಲವಾರು ಪ್ರಾಣಿಪ್ರಿಯರು ಒಂದು ವರ್ಷದ ಅವಧಿಗೆ ಪ್ರಾಣಿಗಳನ್ನು ದತ್ತು ಪಡೆದುಕೊಂಡಿರುತ್ತಾರೆ.
ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ನಿಯಮಿತ, ಮೈಸೂರು ಇವರು ೫೦ ಸಾವಿರ ರೂ. ಪಾವತಿಸಿ ಇಂಡಿಯನ್ ಗ್ರೇ ವೋಲ್ಫ್, ಗ್ರೀನ್ ಅನಕೊಂಡ, ಎಮು, ಹಿಮಾಲಯನ್ ಗೋರಾಲ್ ಮತ್ತು ಸ್ಮೂತ್ ಕೊಟೆಡ್ ಆಟರ್, ಮೈಸೂರಿನ ಎಂ.ಸೌಜನ್ಯ ಎಂಬುವವರು ೨೦ ಸಾವಿರ ಪಾವತಿಸಿ ಇಂಡಿಯನ್ ಗ್ರೇ ವೋಲ್ಫ್ ಪ್ರಾಣಿಯನ್ನು, ಬೆಂಗಳೂರಿನ ಲಕ್ಷ್ಮೀಶ್ ಗೌಡ ೧೦ ಸಾವಿರ ರೂ. ಪಾವತಿಸಿ ಕಾಮನ್ ಆಸ್ಟಿçಚ್, ಬೆಂಗಳೂರಿನಲ್ಲಿರುವ ನರಸಿಪುರ ದೊಡ್ಡಮನೆ ಸುಜನ ಚಾರಿಟೆಬಲ್ ಟ್ರಸ್ಟ್ನಿಂದ ೧೦ ಸಾವಿರ ರೂ. ಪಾವತಿಸಿ ಹಿಮಾಲಯನ್ ಬಬೂನ್ ಪ್ರಾಣಿ, ಬಿಡದಿಯ ಸಂತರಾಮ್ ನಿಂಬಾಲ್ಕರ್ ಅವರು ೨ ಸಾವಿರ ರೂ. ಪಾವತಿಸಿ ನಾಗರಹಾವು, ಮೈಸೂರಿನ ಎ.ಎಂ.ಐ.ಜಿ.ಓ.ಎಸ್(ಕೃತಿಕ್) ಹಾಗೂ ಸುನೀಲ್ ಮಲ್ಲೇಶ್ ಎಂಬುವರು ತಲಾ ೨ ಸಾವಿರ ರೂ. ಪಾವತಿಸಿ ನಕ್ಷತ್ರ ಆಮೆ, ಮೈಸೂರಿನ ಸ್ವಾತಿ ಕಶ್ಯಪ್ ಎಂಬುವರು ೧ ಸಾವಿರ ರೂ. ಪಾವತಿಸಿ ಲವ್ ಬರ್ಡ್ ಅನ್ನು ದತ್ತು ಪಡೆದುಕೊಂಡಿರುತ್ತಾರೆoದು ಉಪಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.