Friday, August 12, 2022

Latest Posts

ಸುದೀಪ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ… ಫ್ಯಾಂಟಮ್ ಚಿತ್ರತಂಡದಿಂದ ‘ಭರ್ಜರಿ ಸರ್ಪ್ರೈಸ್, ಅದು ಏನು ಗೊತ್ತಾ?

ಕಿಚ್ಚ ಸುದೀಪ್  ಅಭಿಮಾನಿಗಳಿಗೆ   ಸಿಹಿ  ಸುದ್ದಿ  ನೀಡುತ್ತಲೇ ಬಂದಿದ್ದಾರೆ. ಇತ್ತೀಚಿಗೆ  ತಾನೇ  ಕೋಟಿಗೊಬ್ಬ -೩  ಚಿತ್ರದ  ಪೋಸ್ಟರ್  ಅನ್ನು  ರಿಲೀಸ್  ಮಾಡಿದ್ದರು. ಇದೀಗ   ಅವರ  ನಟನೆಯ  ಫ್ಯಾಂಟಮ್‌ ಚಿತ್ರ  ‘ಭರ್ಜರಿ  ಸದ್ದು ಮಾಡುತ್ತಿದೆ.

ಯಾಕೆಂದರೆ ಶೀರ್ಷಿಕೆಯಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲೂ ಈ ಚಿತ್ರ ವಿಶೇಷ ಎನಿಸಿಕೊಳ್ಳುತ್ತಿದೆ. ಕೊರೋನಾದ ಕಡು ಕಷ್ಟದ ಕಾಲದಲ್ಲೂ ಫ್ಯಾಂಟಮ್‌ ಸಿನಿಮಾ ಕೆಲಸಗಳು ನಿಂತಿಲ್ಲ. ಅಷ್ಟೇ ಅಲ್ಲ, ಆಗಾಗ ಅಭಿಮಾನಿಗಳಲ್ಲಿ ಕುತೂಹಲ  ಕೆರಳಿಸುತ್ತಲೇ  ಬಂದಿದೆ ಚಿತ್ರತಂಡ.  ಇತ್ತೀಚಿಗೆ  ಚಿತ್ರದ  ಹೊಸ  ಪೋಸ್ಟರ್  ಬಿಡುಗಡೆ ಮಾಡುವುದಾಗಿ ನಿರ್ದೇಶಕ ಅನೂಪ್  ಭಂಡಾರಿ  ಅ‘ಮಾನಿಗಳಿಗೆ  ‘ಭರವಸೆ  ನೀಡಿದ್ದರು.  . ಅದಕ್ಕೆ ತಕ್ಕಂತೆಯೇ ಇಂದು ಬೆಳಗ್ಗೆ ೧೦ ಗಂಟೆಗೆ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣಾ ಪಾತ್ರದ ಸ್ ಲುಕ್  ಪೋಸ್ಟರ್ ಬಹಿರಂಗ ಆಗಿದೆ. ಅದನ್ನು ಕಂಡ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ತಲೆ ಬುರುಡೆ ಆಕಾರದಲ್ಲಿ ಇರುವ ಸಿಂಹಾಸನದ ಮೇಲೆ ಕುಳಿತಿರುವ ಸುದೀಪ್ ಅವರು ಗನ್ ಹಿಡಿದು ಖಡಕ್ ಪೋಸ್ ನೀಡಿದ್ದಾರೆ.ಇದರ ಜೊತೆಗೆ ವಿಕ್ರಾಂತ್ ರೋಣಾ ಪಾತ್ರದ ಬಗ್ಗೆಯೂ ನಿರ್ದೇಶಕ ಅನೂಪ್ ‘ಭಂಡಾರಿ ಕಿರು ಪರಿಚಯ ಮಾಡಿಕೊಟ್ಟಿದ್ದಾರೆ. ಅದಕ್ಕಾಗಿಯೇ ಒಂದು ವಿಡಿಯೋ ಹಂಚಿಕೊಂಡಿಕೊಂಡಿರುವ ಅವರು, ಫ್ಯಾಂಟಮ್‌ ಚಿತ್ರದ ಮುಖ್ಯ ಪಾತ್ರ ವಿಕ್ರಾಂತ್ ರೋಣಾ. ಆ ಹೆಸರಿನಲ್ಲಿ ಎಷ್ಟು ಪರ್ವ ಇದೆಯೋ ಆ ಪಾತ್ರ ಕೂಡ ಅಷ್ಟೇ ಪವರ್ ಫುಲ್. ಅವನು ಏನ್ ಮಾಡ್ತಾನೆ, ಯಾಕೆ ಮಾಡ್ತಾನೆ, ಹೇಗೆ ಮಾಡ್ತಾನೆ ಅನ್ನೋದು ಯಾರಿಗೂ ಅರ್ಥ ಆಗೋದೇ ಇಲ್ಲ. ಆದರೆ ಅವನು ಏನೇ ಮಾಡಿದರೂ ಅದಕ್ಕೊಂದು ಕಾರಣ ಇರುತ್ತೆ’ ಎಂದಿದ್ದಾರೆ. ಈ ಸಿನಿಮಾದ ಚಿತ್ರೀಕರಣದ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಅನ್ನಪೂರ್ಣ ಸ್ಟುಡಿಯೋದಲ್ಲಿ ಕಾಡಿನ ಸೆಟ್ ಹಾಕಿ ಶೂಟಿಂಗ್ ಮಾಡಲಾಗುತ್ತಿದೆ. ಕೊರೋನಾ ವೈರಸ್ ಹಾವಳಿ ಹೆಚ್ಚಿರುವುದರಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಚಿತ್ರೀಕರಣ ನಡೆಸುತ್ತಿದೆ . ಈ  ಚಿತ್ರಕ್ಕೆ  ಜಾಕ್ ಮಂಜು  ಬಂಡವಾಳ ಹೂಡುತ್ತಿದ್ದಾರೆ. ವಿಲಿಯಂ ಡೇವಿಡ್  ಛಾಯಾಗ್ರಹಣ ಮಾಡುತ್ತಿದ್ದಾರೆ.  ಅಜನೀಶ್  ಲೋಕನಾಥ್  ಸಂಗೀತ  ಸಂಯೋಜಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss