Monday, August 8, 2022

Latest Posts

ಸುದೀಪ್ ಹುಟ್ಟುಹಬ್ಬಕ್ಕೆ ಕ್ಷಣಗಣನೆ, ಅಭಿಮಾನಿಗಳಿಂದ ವಿಶೇಷ ಆಚರಣೆ, ಏನು ಮಾಡುತ್ತಿದ್ದಾರೆ ಗೊತ್ತಾ?

ಸುದೀಪ್ ಹುಟ್ಟುಹಬ್ಬಕ್ಕೆ  ಕ್ಷಣಗಣನೆ  ಶುರುವಾಗಿದೆ. ಸೆಪ್ಟೆಂಬರ್ ೦೨ ರಂದು ಸುದೀಪ್ ಹುಟ್ಟುಹಬ್ಬ. ಅಂದಿಗೆ ಸುದೀಪ್ ಹುಟ್ಟಿ ೪೭ ವರ್ಷವಾಗುತ್ತದೆ. ಕೊರೊನಾ ಕಾರಣದಿಂದ ಈ ಬಾರಿ ಸ್ಟಾರ್ ನಟರ ಹುಟ್ಟುಹಬ್ಬಗಳು ಅದ್ಧೂರಿತನ ಕಳೆದುಕೊಂಡಿವೆ. ಸುದೀಪ್ ಹುಟ್ಟುಹಬ್ಬವೂ ಈ ಬಾರಿ ಸರಳವಾಗಿರಲಿದೆ. ಅದ್ಧೂರಿಗೆ ಬದಲಾಗಿ ಅರ್ಥಪೂರ್ಣವಾಗಿ ಸುದೀಪ್ ಹುಟ್ಟುಹಬ್ಬ ಆಚರಿಸಲು ಕಿಚ್ಚನ ಅಭಿಮಾನಿಗಳು ಸಜ್ಜಾಗಿದ್ದಾರೆ. ಸುದೀಪ್ ಹುಟ್ಟುಹಬ್ಬದಂದು ಸಾಮಾಜಿಕ ಕಾರ್ಯಗಳನ್ನು ಮಾಡಲು ಸುದೀಪ್ ಅಭಿಮಾನಿಗಳು ತಯಾರಾಗಿದ್ದಾರೆ. ಅಂದಿನ ದಿನ ಏನೇನು ಕಾರ್ಯ ಮಾಡಲಿದ್ದೇವೆ ಎಂಬ ಕಿರುಪಟ್ಟಿಯನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸುದೀಪ್ ಹುಟ್ಟುಹಬ್ಬದಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಪ್ರಮುಖ ದೇವಾಲಯಗಳಲ್ಲಿ ಸುದೀಪ್ ಹೆಸರಿನಲ್ಲಿ ಅರ್ಚನೆ ಮಾಡಿಸುತ್ತಿದ್ದಾರೆ ಸುದೀಪ್ ಅಭಿಮಾನಿಗಳು. ವಿಶೇಷ ಪೂಜೆ , ಪ್ರಸಾದ ವಿತರಣೆಗಳು ಜರುಗಲಿವೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅನಾಥಾಶ್ರಮಗಳಿಗೆ ದಿನಸಿ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಕಿಚ್ಚನ ಅಭಿಮಾನಿಗಳು. ಜೊತೆಗೆ ಅನಾಥಾಶ್ರಮದ ಮಕ್ಕಳು ಅನಾಥಾಶ್ರಮದ ವಾಸಿಗಳೊಂದಿಗೆ ಸುದೀಪ್ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ.

ಇದರ ಜೊತೆಗೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು, ಕಾರ್ಮಿಕರಿಗೆ ಸುದೀಪ್ ಹುಟ್ಟುಹಬ್ಬದ ದಿನದಂದು ಮಾಸ್ಕ್ ವಿತರಣೆ ಸಹ ಮಾಡಲಿದ್ದಾರೆ. ಪೌರ ಕಾರ್ಮಿಕರು ಇತರೆ ಕೊರೊನಾ ವಾರಿಯರ್ಗಳಿಗೆ ಸಹ ಉಚಿತ ಮಾಸ್ಕ್ ವಿತರಿಸಲಿದ್ದಾರೆ. ಈ ಸಮಾಜ ಸೇವಾ ಪಟ್ಟಿಯನ್ನು ಕಿಚ್ಚ ಚಾರಿಟೇಬಲ್ ಟ್ರಸ್ಟ್ ನವರು ಟ್ವಿಟ್ಟರ್ನಲ್ಲಿ ಪ್ರಕಟಿಸಿದ್ದಾರೆ. ಕಿಚ್ಚ ಚಾರಿಟೇಬಲ್ ಟ್ರಸ್ಟ್ ಈ ಮೊದಲೂ ಸಹ ಕೆಲವು ಸಾಮಾಜಿಕ ಕಾರ್ಯಗಳನ್ನು ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss