Friday, July 1, 2022

Latest Posts

 ಸುಪ್ರೀಂಕೋರ್ಟ್‌ನಲ್ಲಿ ಜೈನ್ ಸಂಘಟನೆ ಪಿಐಎಲ್: ಕೊರೋನಾ ಹತೋಟಿಗೆ ಬರೋವರೆಗೂ ಮಾಂಸ ಮಾರಾಟ ನಿಷೇಧಿಸಿ

ಹೊಸದಿಲ್ಲಿ: ಭಾರತದಲ್ಲಿ ಕೊರೋನಾ ಸೋಂಕು ವಿಜೃಂಬಿಸಿರುವ ದಿಶೆಯಲ್ಲಿ ಪ್ರಾಣಿಗಳ ವದೆ ಹಾಗೂ ಮಾಂಸ ಮಾರಾಟವನ್ನು ನಿಷೇಧ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ ದಾಖಲಿಸಲಾಗಿದೆ.
ಜೈನ್ ಸಂಘಟನೆ ಈ ಅರ್ಜಿಯನ್ನು ಸಲ್ಲಿಸಿದ್ದು, ಪ್ರಕರಣ ವಿಚಾರಣೆಗೆ ಬರಬೇಕಿದೆ. ಭಾರತವೂ ಸೇರಿದಂತೆ ಪ್ರಪಂಚದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ದಿನೇ ದಿನೇ ಅಧಿಕವಾಗತೊಡಗಿದೆ. ಅಲ್ಲದೆ ಕೊರೋನಾ ವೈರಾಣು ಪ್ರಾಣಿಗಳಿಂದಲೇ ಹರಡುವುದೆಂಬುದು ವೈಜ್ಞಾನಿಕವಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ. ಆದ್ದರಿಂದ ಕೆಲ ದಿನಗಳ ಕಾಲ ದೇಶದಲ್ಲಿ ಹಲಾಲ್ ಮಾಂಸ ಮಾರಾಟವನ್ನು ಸರ್ಕಾರ ನಿಷೇಧಿಸಬೇಕು. ಅಲ್ಲದೆ ಮೀನಿನ ವ್ಯಾಪಾರವನ್ನೂ ಸರ್ಕಾರ ನಿಯಂತ್ರಿಸಬೇಕೆಂದು ಅರ್ಜಿದಾರರು ನ್ಯಾಯಪೀಠವನ್ನು ಕೋರಿದ್ದಾರೆ.
ದೇಶದ ಆಹಾರ ಪದ್ಧತಿಯಲ್ಲಿ ಕೆಲವೊಂದು ಕಟ್ಟುಪಾಡುಗಳಿಲ್ಲದಿದ್ದಲ್ಲಿ ಕೊರೋನಾ ಹತೋಟಿಗೆ ಬರುವುದು ಕಷ್ಟ. ಸರಳ ಆಹಾರ ಮತ್ತು ಪಾನೀಯ ಸೇವನೆ ಮೂಲಕವೂ ಸೋಂಕು ನಿಗ್ರಹಕ್ಕೆ ಒಂದು ಮಾರ್ಗ. ಇಂತಹ ಸನ್ನಿವೇಶದಲ್ಲಿ ಮಾಂಸಾಹಾರ ಸೇವನೆಯನ್ನು ನಿಯಂತ್ರಿಸುವುದು ಅಗತ್ಯವಿದೆ. ಮಿಗಿಲಾಗಿ ಭಾರತೀಯ ವೈದ್ಯ ಸಂಶೋಧನೆ ಮಂಡಳಿ ಕೂಡಾ ನ್ಯಾಯಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಲು ಆದೇಶ ನೀಡಲು ನ್ಯಾಯಪೀಠವನ್ನು ಕೋರಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss