Monday, August 8, 2022

Latest Posts

ಸುಬ್ರಹ್ಮಣ್ಯ| ಗುಡುಗು ಸಹಿತ ಭಾರಿ ಗಾಳಿ ಮಳೆ

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಶನಿವಾರ ಸಂಜೆವೇಳೆ ಬಾರಿ ಗಾಳಿ ಮಳೆಯಾಯಿತು.ಅಲ್ಲದೆ ಸುತ್ತಮುತ್ತಲ ಪ್ರದೇಶದಲ್ಲಿ ಕೂಡ ಗುಡುಗು ಸಹಿತ ಗಾಳಿ ಮಳೆಯಾಗಿದೆ . ಮಳೆಯ ನೀರಿನಿಂದ ಸುಬ್ರಹ್ಮಣ್ಯ ಸುತ್ತಮುತ್ತಲಿನ ನದಿ ಹಳ್ಳ ,ತೊರೆಗಳು ಸ್ವಲ್ಪ ಮಟ್ಟಿಗೆ ತುಂಬಿ ಹರಿಯಿತು.ಅಲ್ಲದೆ ಸುಬ್ರಹ್ಮಣ್ಯ ಮುಖ್ಯ ರಸ್ತೆ ಯ ಕುಮಾರಧಾರ ಬಳಿ ರಸ್ತೆ ಸಂಪೂರ್ಣ ನೀರಿನಿಂದ ಜಲಾಆವೃತವಾಯಿತು. ಮುಖ್ಯರಸ್ತೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಯಿಂದ ರಸ್ತೆಗಳು ಜಲಾವೃತವಾಯಿತು.ಕೆಲವೊಂದು ಭಾಗದಲ್ಲಿ ಸಣ್ಣ ಪುಟ್ಟ ಮರಗಳು ರಸ್ತೆ ಗೆ ಅಡ್ಡಲಾಗಿ ಬಿದ್ದಿದ್ದವು .

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss