ಸುಬ್ಮಹ್ಮಣ್ಯ: ಇಂದು ಮುಂಜಾನೆ ಕಾಡಾನೆಯೊಂದು ಸುಬ್ರಹ್ಮಣ್ಯ ಪೇಟೆಯಲ್ಲಿ ನಡೆಸಿದ ‘ಸಿಟಿ ರೌಂಡ್’ ಕೆಲಕಾಲ ನಾಗರಿಕರನ್ನು ಆತಂಕ, ಅಚ್ಚರಿಗೆ ತಳ್ಳಿತ್ತು.
ಗುರುವಾರ ಮುಂಜಾನೆ ಸುಮಾರು 5.45ರ ಸುಮಾರಿಗೆ ಸುಬ್ರಹ್ಮಣ್ಯದ ಮಯೂರ ಲಾಡ್ಜ್ ಬಳಿಯಲ್ಲಿ ಕಾಶಿಕಟ್ಟೆಯಾಗಿ ನೂಚಿಲ ಕಡೆಗೆ ಬಿಂದಾಸ್ ಆಗಿ ತೆರಳಿದ ಕಾಡಾನೆಯನ್ನು ಕಂಡು ನಾಗರಿಕರು ಭಯಾತಂಕಕ್ಕೆ ಒಳಗಾದರು. ಕೆಲವರು ಈ ದೃಶ್ಯವನ್ನು ಮೊಬೈಲ್ -ನ್ ನಲ್ಲಿ ಸೆರೆ ಹಿಡಿದಿದ್ದು, ಈಗ ಈ ವಿಡಿಯೋ ವೈರಲ್ ಆಗಿದೆ.
ಹಲವಾರು ದಿನಗಳಿಂದ ಕುಲ್ಕುಂದ ಆಸುಪಾಸಿನಲ್ಲಿ ಕಾಡಾನೆ ದಾಳಿ ನಡೆಸಿ ಕೃಷಿ ಹಾನಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಈ ನೇರ ಪೇಟೆಗೇ ಆನೆ ನುಗ್ಗಿ ಜನರಲ್ಲಿ ಆತಂಕ ಹುಟ್ಟಿಸಿದೆ.