ಮಂಗಳೂರು: ಮಾರಕ ಸೋಂಕು ಕೊರೋನಾ ಸುರತ್ಕಲ್ ಗೂ ಕಾಲಿಟ್ಟಿದೆ.
68ವರ್ಷದ ಮಹಿಳೆಯಲ್ಲಿ ಶುಕ್ರವಾರ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಮಂಗಳೂರಿನಲ್ಲಿ ಶುಕ್ರವಾರ ಒಟ್ಟು 16 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಸುರತ್ಕಲ್ ನ ಮಹಿಳೆಯೂ ಸೇರಿದ್ದಾರೆ.
ದುಬೈಯಿಂದ ಮೇ 12 ರಂದು ವಿಮಾನದ ಮೂಲಕ ಬಂದ 176 ಮಂದಿಯ ಪೈಕಿ 15 ಮಂದಿ ಮಂಗಳೂರಿನಲ್ಲಿ ಕ್ವಾರಂಟೈನ್ ನಲ್ಲಿದ್ದು ಅವರಲ್ಲಿ ಪಾಸಿಟಿವ್ ಕಂಡು ಬಂದಿದೆ. ಇವರಲ್ಲಿ 14 ಮಂದಿ ದಕ್ಷಿಣ ಕನ್ನಡದ ನಿವಾಸಿಗಳಾದರೆ ಒಬ್ಬರು ಉತ್ತರ ಕನ್ನಡದವರು.