Thursday, August 11, 2022

Latest Posts

ಸುರಪುರ| ಕೊರೋನಾ ವಾರಿಯರ್ಸ್ , ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಗಂಟಲು ದ್ರವ ಸಂಗ್ರಹ

ಸುರಪುರ: ಕೊರೋನಾ ಸೊಂಕು ಹರಡದಂತೆ ನಿರಂತರ ಹೋರಾಟ ನಡೆಸುವ ಕೊರೊನಾ ವಾರಿಯರ್ಸ್ಗಳಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗಂಟಲು ದ್ರವ ಪರೀಕ್ಷೆಗೆ ತೆಗೆದುಕೊಳ್ಳಲಾಯಿತು.
ನಗರದ ಸರಕಾರಿ ಆಸ್ಪತ್ರೆಯಲ್ಲಿ ಮದ್ಹಾö್ಯನ ನಡೆದ ಪರೀಕ್ಷೆಯಲ್ಲಿ ನೂರಕ್ಕು ಹೆಚ್ಚು ಜನ ಕೊರೊನಾ ವಾರಿಯರ್ಸ್ ಭಾಗವಹಿಸಿ ಕೊರೊನಾ ಸೊಂಕಿನ ಪರೀಕ್ಷೆಗಾಗಿ ತಮ್ಮ ಗಂಟಲು ದ್ರವ ಪರೀಕ್ಷೆಗೊಳಪಟ್ಟರು.ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ: ಆರ್.ವಿ.ನಾಯಕ ಮಾತನಾಡಿ,ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕೊರೊನಾ ವಿರುಧ್ಧ ನಿತ್ಯವು ಹೋರಾಟ ನಡೆಸುತ್ತಾರೆ.ತಮ್ಮ ಸೇವೆಯಲ್ಲಿ ತೊಡಗಿರುವಾಗ ಸೊಂಕು ತಗಲುವು ಸಾಧ್ಯತೆಯು ಇರುತ್ತದೆ.ಆದ್ದರಿಂದ ಸರಕಾರ ಎಲ್ಲಾ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗಂಟಲು ದ್ರವ ಪರೀಕ್ಷೆಗೊಳಿಸಲು ಆದೇಶ ಬಂದಿದ್ದರಿAದ ಎಲ್ಲರ ಸ್ವಾಬ್ ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.ಎಲ್ಲಾ ಕಾರ್ಯರ್ತೆಯರು ಮತ್ತು ಸಹಾಯಕಿಯರು ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ಸರತಿ ಸಾಲಲ್ಲಿ ಬಂದು ಪರೀಕ್ಷೆಗೊಳಗಾದರು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ: ಹರ್ಷವರ್ಧನ ರಫಗಾರ,ಡಾ: ಓಂ ಪ್ರಕಾಶ ಅಂಬುರೆ ಹಾಗು ಸಿಬ್ಬಂದಿಗಳಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss