Saturday, August 13, 2022

Latest Posts

ಸುರಪುರ| ಕ್ಷೇತ್ರದ ರೈತರ, ಜನರ ನೆರವಿಗೆ ಸದಾ ಬದ್ಧ: ಶಾಸಕ ರಾಜುಗೌಡ ಭರವಸೆ

ಸುರಪುರ : ಇತ್ತೀಚೆಗೆ ಕ್ಷೇತ್ರದಲ್ಲಿ ಸುರಿದ ಅಕಾಲಿಕ ಮಳೆ ಕ್ಷೇತ್ರದಲ್ಲಿ ಸಾಕಷ್ಟು ಹಾನಿಯುಂಟು ಮಾಡಿದೆ. ನಾನು ಸದನದಲ್ಲಿ ಭಾಗವಹಿಸಿದ್ದರಿಂದ ಭೇಟಿ ನೀಡಲು ಸಾಧ್ಯವಾಗಿಲ್ಲ. ರೈತರು ಮತ್ತು ಜನರು ನೆರವಿಗೆ ನಾನು ಮತ್ತು ನಮ್ಮ ಸರಕಾರ ಸದಾ ಬದ್ಧ ಎಂದು ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಅಧ್ಯಕ್ಷ ಮತ್ತು ಶಾಸಕ ನರಸಿಂಹನಾಯಕ (ರಾಜೂಗೌಡ) ಹೇಳಿದ್ದಾರೆ.
ಪತ್ರಿಕೆಯೊಂದಿಗೆ ಅವರು ಈ ಕುರಿತಂತೆ ಮಾತನಾಡಿ, ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಮನೆಗಳು ಬಿದ್ದಿವೆ. ಕಾಲುವೆ ಮತ್ತು ಮಳೆ ನೀರಿನಿಂದ ಸಾವಿರಾರು ಹೆಕ್ಟೇರ್ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿದು ಜಮೀನುಗಳಿಗೆ ನೀರು ನುಗ್ಗಿದೆ. ಕೆಲ ಗ್ರಾಮಗಳ ರಸ್ತೆಗಳು ಕಿತ್ತು ಹೋಗಿ ಸಂಚಾರ ಕಡಿತ ಗೊಂಡಿವೆ. ಈ ಎಲ್ಲವುಗಳ ಬಗ್ಗೆ ನನ್ನ ಅಭಿಮಾನಿಗಳ ಗ್ರೌಂಡ್ ವರ್ಕ ತಂಡ ಸಮಗ್ರ ಮಾಹಿತಿ ನೀಡುತ್ತಿದೆ ಎಂದು ತಿಳಿಸಿದರು.
ಎಲ್ಲಾ ಕಡೆ ಖುದ್ಧಾಗಿ ಭೇಟಿ ನೀಡಿ, ಬೆಳೆ ಹಾನಿ ಮತ್ತು ಮನೆ ಬಿದ್ದಿರುವ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ರವಾನಿಸುವಂತೆ ಈಗಾಗಲೆ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಕುರಿತು ಸದನದಲ್ಲಿ ಧ್ವನಿ ಎತ್ತಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ಮತ್ತು ಮನೆ ಕಳೆದು ಕೊಂಡವರಿಗೆ ಮನೆ ಒದಗಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಪ್ರತಿ ಜಿಲ್ಲಾ ಪಂಚಾಯತ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಮಾಹಿತಿ ಸಂಗ್ರಹಿಸಲು ರಾಜೂಗೌಡ ಗ್ರೌಂಡ್ ವರ್ಕ ತಂಡ ರಚಿಸಲಾಗಿದೆ. ಅಧಿಕಾರಿಗಳೊಂದಿಗೆ ತಂಡ ಸಹಕರಿಸಲಿದೆ. ಸಂತ್ರಸ್ತರು ಕೂಡಲೆ ಅಧಿಕಾರಿಗಳನ್ನಾಗಲಿ ಅಥವಾ ನನ್ನ ತಂಡದವರನ್ನಾಗಲಿ ಸಂಪರ್ಕಿಸಿ ಫೋಟೊದೊಂದಿಗೆ ಮಾಹಿತಿ ನೀಡಬೇಕು. ಸದನ ಕಲಾಪ ಮುಗಿದ ನಂತರ ಎಲ್ಲಡೆ ಖುದ್ದು ಭೇಟಿ ನೀಡಿ ಸಮಸ್ಯೆಗೆ ಸ್ಪಂದಿಸುವುದಾಗಿ ಅವರು ಭರವಸೆ ನೀಡಿದರು.
ರಾಜೂಗೌಡ ಗ್ರೌಂಡ್ ವರ್ಕ ತಂಡ
ನಗರಸಭೆ ವ್ಯಾಪ್ತಿಯಲ್ಲಿ-7406361644, ಖಾನಾಪುರ ಎಸ್‌ಹೆಚ್ ಜಿಪಂ ವ್ಯಾಪ್ತಿಯಲ್ಲಿ-9686751668, ಅರಕೇರಾ.ಜೆ ಜಿಪಂ-823248180, ಪೇಠಅಮ್ಮಾಪುರ-9980310817, ಹುಣಸಗಿ-7026060222, ಕಕ್ಕೇರಾ-9611270089, ರಾಜನಕೋಳೂರು ಜಿಪಂ-7676630863, ಕೊಡೇಕಲ್ ಜಿಪಂ-9900909594, ದೇವತ್ಕಲ್ ಜಿಪಂ-8971134464 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಶಾಸಕರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss