Saturday, July 2, 2022

Latest Posts

ಸುರಪುರ ಬಸ್ ಘಟಕದ ಸಿಬ್ಬಂದಿಗೆ ಕೊರೋನಾ ಪಾಸಿಟಿವ್: 9 ಮಂದಿ ಹೋಂ ಕ್ವಾರಂಟೈನ್

ಯಾದಗಿರಿ : ಯಾದಗಿರ ಜಿಲ್ಲೆಯ ಸುರಪುರ ಬಸ್ ಘಟಕದ ಓರ್ವ ಚಾಲಕನಿಗೆ ಬೆಂಗಳೂರಿಗೆ ಹೋಗಿಬಂದ ಪ್ರಯುಕ್ತ ಕೊರೊನಾ ಪಾಸಿಟಿವ್ ಬಂದಿದೆ ಇದರಿಂದ ಪ್ರಾಥಮಿಕ ಹಂತದ ಟ್ರಾವೇಲ್ ಹಿಸ್ಟರಿಯಲ್ಲಿ ಬಸ್ ಘಟಕದ 9 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಅದರಲ್ಲಿ ಘಟಕ ವ್ಯವಸ್ಥಾಪಕ ಮತ್ತು ಸಂಚಾರ ಮೇಲ್ವೀಚಾರಕ ಸಿಬ್ಬಂದಿ ಘಟಕದಲ್ಲಿ ನಿರ್ವಹಿಸುವ ಸಿಬ್ಬಂದಿಗಳು ಅವನೊಂದಿಗೆ ಸಂಪರ್ಕ ಹೊಂದಿದ್ ಪ್ರಯುಕ್ತ ಅವರನ್ನು ಹೋಂ ಕ್ವಾರಂಟೈನ ಮಾಡಲಾಗಿದೆ. ಇದರಿಂದ ಆತಂಕಕ್ಕೆ ಒಳಗಾದ ಚಾಲಕ ನಿರ್ವಾಹಕರು ಘಟಕಕ್ಕೆ ಸೇವೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟಕಕ್ಕೆ ಮೊತ್ತೊಬ್ಬರನ್ನು ನೇಮಿಸಿಲ್ಲ ಮತ್ತು ಸಿಬ್ಬಂದಿಗಳನ್ನು ಸೇವೆಗೆ ಕಳುಹಿಸಿಲ್ಲ ಸದ್ಯ ಇರುವ ಸಿಬ್ಬಂದಿಗಳು ಬಸ್ ಘಟಕವನ್ನು ನಿರ್ವಹಿಸುತ್ತಿದ್ದಾರೆ.
ಸಿಬ್ಬಂದಿಗಳಲ್ಲಿ ಅಸಮದಾನ : ಆತಂಕ್ಕೆ ಒಳಗಾದ ಸಿಬ್ಬಂಧಿಗಳಿಗೆ ಆತ್ಮ ಸ್ಥೆರ್ಯ ತುಂಬಲಿಕ್ಕಗಾಲಿ ಮತ್ತು ಕಾರ್ಮಿಕರು ಕೊರೊನಾ ಸಂಕಷ್ಟದಲ್ಲಿದ್ದವರ ಆರೋಗ್ಯ ವಿಚಾರಣೆಗಾಗಿ ಸೌಜನ್ಯಕಾದರೂ ಎನ್‌ಈಕೆಆರ್‌ಟಿಸಿ ಹಿರಿಯ ಅಧಿಕಾರಿಗಳಾಗಲಿ, ಜಿಲ್ಲಾಧಿಕಾರಿಗಳಾಗಲಿ, ಮತ್ತು ಸ್ಥಳೀಯ ಶಾಸಕರಾಗಲಿ ಸೌಜನ್ಯಕಾದರೂ ಬೇಟಿ ನೀಡದೆ ಇರುವುದು ಇದ್ದ ಸಿಬ್ಬಂದಿಗಳಲ್ಲಿ ಅಸಮದಾನ ಮೂಡಿಸಿದೆ ಎಂಬುದು ತಿಳಿದು ಬಂದಿದೆ.
ಸಾರ್ವಜನಿಕರ ದೃಷ್ಠಿಯಿಂದ ಮತ್ತು ಎಸ್‌ಎಸ್‌ಎಲ್‌ಸಿ ಮಕ್ಕಳಿಗಾಗಿ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ. ಈಗಲಾದರೂ ಸಂಬAಧಿತ ಅಧಿಕಾರಿಗಳು ಘಟಕಕ್ಕೆ ಭೇಟಿ ನೀಡಿ ಆತ್ಮಸ್ಥೆರ್ಯ ತುಂಬಲು ಮುಂದಾಗಬೇಕು ಎಂಬುದು ಜನರ ಅಭಿಪ್ರಾಯವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss