Monday, August 15, 2022

Latest Posts

ಸುರಿದದ್ದು ಕೇವಲ ಮೂರು ಗಂಟೆ ಮಳೆ… ಅಕ್ಷರಶಃ ಮುಳುಗಿಬಿಟ್ಟಿತು ನೋಡಿ ನಮ್ಮ ಬೆಂಗಳೂರು…

ಮಂಗಳೂರು: ಸುರಿದದ್ದು ಕೇವಲ ಮೂರು ಗಂಟೆ ಮಳೆ… ಅಷ್ಟಕ್ಕೇ ರಾಜಧಾನಿ ಬೆಂಗಳೂರು ತತ್ತರಿಸಿಹೋಗಿದೆ. ಎಲ್ಲೆಲ್ಲೂ ನೀರು ನೀರು ಮತ್ತೆ ನೀರೇ!
ಶಿವಾಜಿನಗರ, ಯಶವಂತಪುರ, ಮಲ್ಲೇಶ್ವರಂ, ಮೆಜೆಸ್ಟಿಕ್, ರಾಜಾಜಿನಗರ, ಹೊಸಕೆರೆಹಳ್ಳಿ, ಬಸವನಗುಡಿ, ಪೀಣ್ಯ, ಶಾಂತಿನಗರ. ಹೆಬ್ಬಾಳ, ಮಡಿವಾಳ. ಗಾಂಧಿನಗರ. ಕೆಂಗೇರಿ…. ಹೀಗೆ ಎಲ್ಲೀ ಹೋದರೂ ಜಲಾವೃತಗೊಂಡ ದೃಶ್ಯಗಳೆ…
ರಾತ್ರಿಯೂ ಮಳೆ ಮುಂದುವರಿದಿದ್ದು, ಭಾರಿ ಮಳೆಯಿಂದಾಗಿ ವಾಹನ ಸವಾರರ ಪರದಾಟ ನಡೆಸುವಂತಾಗಿದೆ. ಅನೇಕ ರಸ್ತೆ, ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತಿದೆ. ಗವಿಗಂಗಾಧರೇಶ್ವರ ದೇವಾಲಯದ ಕಾಂಪೌಂಡ್ ಕುಸಿದಿದ್ದರೆ, ಲಾಲ್ಬಾಗ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊಸಕೆರೆಹಳ್ಳಿ ಸಮೀಪ ದತ್ತಾತ್ರೇಯ ರಸ್ತೆಗೆ ರಾಜಕಾಲುವೆಯ ನೀರು ನುಗ್ಗಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಿನರ್ವ ಸರ್ಕಲ್ ಸಮೀಪ ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ಒಟ್ಟಿನಲ್ಲಿ ಮೂರೇ ಮೂರೂ ಗಂಟೆ ಸುರಿದ ಧಾರಾಕಾರ ಮಳೆಗೆ ರಾಜಧಾನಿ ಅಕ್ಷರಶಃ ಮುಳುಗಿದಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss