Saturday, August 13, 2022

Latest Posts

ಸುರೇಶ ಅಂಗಡಿ ಅವರ ಸ್ವಗ್ರಾಮ ಬೆಳಗಾವಿಯಲ್ಲಿ ಸ್ಮಶಾನ ಮೌನ

ಬೆಳಗಾವಿ: ಕೃಷಿ ಕುಟುಂಬದಿಂದ ಬೆಳಗಾವಿ ತಾಲ್ಲೂಕಿನ ಕೆ‌.ಕೆ.ಕೊಪ್ಪ ಎಂಬ ಹಳ್ಳಿಯಿಂದ ದೆಹಲಿವರೆಗೆ ಬೆಳೆದ ಬಂದ ಸುರೇಶ ಅಂಗಡಿ ಅವರು ಬುಧವಾರ ನಿಧನರಾದ ಸುದ್ದಿ ತಿಳಿದ ಸ್ವಗ್ರಾಮ ಸೇರಿದಂತೆ ಬೆಳಗಾವಿ ಮಹಾನಗರದ ಸದಾಶಿವ ನಗರದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.
ಬುಧವಾರ ದೆಹಲಿಯಲ್ಲಿ ಕೇಂದ್ರ ಸಚಿವ ಸುರೇಶ ಅಂಗಡಿ ನಿಧನರಾದರು, ಗುರುವಾರ ಅಂತ್ಯಸಂಸ್ಕಾರ ಹಿನ್ನಲೆಯಲ್ಲಿ ಸುರೇಶ ಅಂಗಡಿ ಅವರ ಕುಟುಂಬಸ್ಥರ  ಜತೆಗೆ ಸ್ವಾಮೀಜಿ ಬಾಳಯ್ಯ ಹಿರೇಮಠ ಕೂಡ ದೆಹಲಿಗೆ ಪ್ರಯಾಣ ಬೆಳೆಸಿದ್ದರು.
ಬೆಳಗಾವಿಯಿಂದ ಒಂಬತ್ತು ಜನ ಕುಟುಂಬಸ್ಥರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ದೆಹಲಿಯ ಲಿಂಗಾಯತ ಸಮಾಜದ ರುದ್ರಭೂಮಿಯಲ್ಲಿ ಸುರೇಶ ಅಂಗಡಿ ಅವರ ಅಂತ್ಯಸಂಸ್ಕಾರವನ್ನು ಲಿಂಗಾಯತ ಸಮಾಜದ ಪದ್ದತಿಯ ಪ್ರಕಾರ, ನೆರವೇರಿಸಲು ಬೆಳಗಾವಿಯಿಂದ ಬಾಳಯ್ಯ ಸ್ವಾಮೀಜಿ ಅವರು ದೆಹಲಿಗೆ ತೆರಳಿದ್ದಾರೆ.
ಇತ್ತ ಬೆಳಗಾವಿಯ ಸದಾಶಿವನಗರದ ಮನೆಯಲ್ಲಿ ಬೆಂಬಲಿಗರು,ನಾಯಕರು,ಅಭಿಮಾನಿಗಳು ತಂಡೋಪ ತಂಡವಾಗಿ ಆಗಮಿಸಿ ಸುರೇಶ ಅಂಗಡಿ ಅವರ ಭಾವ ಚಿತ್ರಕ್ಕೆ ಅಂತಿಮ ನಮನ ಸಲ್ಲಿಸಿದರು.
ತಮ್ಮ ಸುರೇಶ ಅಂಗಡಿ ಅಂತಿಮ ದರ್ಶನ ಪಡೆಯಲಾಗದೇ ಅಣ್ಣ ಡಾ.ಸಿ.ಸಿ.ಅಂಗಡಿ ಕಣ್ಣೀರು ಹಾಕಿದ್ದರು. ತಾಯಿ ಹೆಸರಿನಲ್ಲಿ ಊರಿನಲ್ಲಿ ಸುರೇಶ ಅಂಗಡಿ ಪಿಯು, ಡಿಗ್ರಿ ಕಾಲೇಜು ಕಟ್ಟಿಸಿದ್ದ, ಬೆಳಗಾವಿಯಲ್ಲಿ ಇಂಜಿನಿಯರಿಂಗ್ ಕಾಲೇಜು ಕಟ್ಟಿಸಿದ್ದರು, ಸುತ್ತ 150 ಹಳ್ಳಿಯಿಂದ ಕಾಲೇಜುಗೆ ವಿದ್ಯಾರ್ಥಿಗಳು ಬರುತ್ತಾರೆ, ಕೆ.ಕೆ.ಕೊಪ್ಪ ಗ್ರಾಮದ ಕಾಲೇಜು ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿಸಬೇಕು ಅಂದುಕೊಂಡಿದ್ವಿ, ಆದರೆ ಕೊರೋನಾ ಮಾರ್ಗಸೂಚಿ ಹಿನ್ನೆಲೆ ಪಾರ್ಥಿವ ಶರೀರ ತರಲು ಅನುಮತಿ ನೀಡಲಿಲ್ಲ,
ವಿ ಆರ್ ಸ್ಟಿಕ್ ಆನ್ ಅವರ್ ರೂಲ್ಸ್.. ವೀ ಕಾಂಟ್ ವೊಯ್ಲೆಟ್ ಅಂದರು ಎಂದು,ಬೆಳಗಾವಿಯ ಸುರೇಶ ಅಂಗಡಿ ನಿವಾಸದಲ್ಲಿ ಸಿ.ಸಿ.ಅಂಗಡಿ ಕಣ್ಣೀರು ಹಾಕಿದರು.
ಇತ್ತ ಶಾಸಕ ಅನಿಲ ಬೆನಕೆ ಸೇರಿದಂತೆ ಬಿಜೆಪಿ ಮುಖಂಡರು, ಪದಾಧಿಕಾರಿಗಳು ಸದಾಶಿವ ನಗರದ ಸಚಿವ ಸುರೇಶ ಅಂಗಡಿ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿ ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss