ಮಂಗಳೂರು: ಕಡಬ ತಾಲೂಕಿನ ಶಾಸಕ ಎಸ್. ಅಂಗಾರ ಅವರು ಅಸ್ವಸ್ಥಗೊಂಡ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂಗಾರರು ಇಂದು ಕಡಬದಲ್ಲಿ ಲಾಖ್ ಡೌನ್ ಕುರಿತಾಗಿ ಸಭೆ ನಡೆಸಿ, ಬಳಿಕ ಕಡಬ ಸಹಕಾರಿ ಸಂಘಕ್ಕೆ ತೆರಳಿ ಪಡಿತರ ವಿತರಣೆಗೆ ಸಂಬಂಧಿಸಿದಂತೆ ವಿಚಾರಿಸಿ ಮಾಹಿತಿ ಪಡೆಯುವ ಸಂದರ್ಭ ಅಸ್ವಸ್ಥಗೊಂಡರು.
ಕೂಡಲೇ ಅವರನ್ನು ಕಡಬ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅವರಿಗೆ ರಕ್ತದೊತ್ತಡ ಕಡಿಮೆಯಾಗಿ ಈ ರೀತಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಅವರನ್ನು ಪುತ್ತೂರಿನಲ್ಲಿನ ಪ್ರಗತಿ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲೂ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.