Friday, August 19, 2022

Latest Posts

ಸುಳ್ಳು ಆರೋಪಗಳೆಲ್ಲ ಫೇಲ್… ಭಾರತದ ನೆಲಕ್ಕೆ ಬಂದಿಳಿಯಿತು ನೋಡಿ ರಫೇಲ್!

ನವದೆಹಲಿ: ರಫೇಲ್ ನಮ್ಮ ನೆಲಕ್ಕೆ ಬಂದಿಳಿದಿದೆ. ರಫೇಲ್ ಕುರಿತ ಸುಳ್ಳು ಆರೋಪಗಳಿಗೆಲ್ಲ ಈಗಾಗಲೇ ಉತ್ತರ ನೀಡಿದ್ದೇವೆ. ಇನ್ನೂ ರಫೇಲ್ ಖರೀದಿ ವಿಚಾರದಲ್ಲಿ ಯಾರಿಗಾದರೂ ವಿರೋಧ, ಅಸಮಾಧಾನಗಳಿದ್ದರೆ ನಾವು ಅದಕ್ಕೆ ಸರಿಯಾದ ಉತ್ತರ ನೀಡಲು ಸಿದ್ಧರಿದ್ದೇವೆ. ನಾನು ಭಾರತೀಯ ವಾಯುಪಡೆಯನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ರಫೇಲ್ ಆಗಮನದ ಮೂಲಕ ವಾಯುಪಡೆಯ ಸಾಮರ್ಥ್ಯ ದುಪ್ಪಟ್ಟುಗೊಂಡಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಕ್ಷಣಾ ಸಚಿವರು, ಫ್ರಾನ್ಸ್ ನಿರ್ಮಿತ ರಫೇಲ್ ಯುದ್ಧ ವಿಮಾನಗಳು ಭಾರತದ ಅಂಬಾಲಾ ವಾಯುನೆಲೆಗೆ ಬಂದಿಳಿಯುತ್ತಿದ್ದಂತೆಯೇ ಹರ್ಷ ವ್ಯಕ್ತಪಡಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು,ರಫೇಲ್‌ಯುದ್ಧ ವಿಮಾನದ ಆಗಮನವು ಭಾರತೀಯ ಸೇನಾ ಇತಿಹಾಸದ ಹೊಸ ಯುಗವಾಗಲಿದೆ ಎಂದು ಬಣ್ಣಿಸಿದ್ದಾರೆ.
ಉಕ್ಕಿನ ಹಕ್ಕಿಗಳು ಸುರಕ್ಷಿತವಾಗಿ ಬಂದಿಳಿದಿವೆ. ರಫೇಲ್ ಯುದ್ಧ ವಿಮಾನದ ಆಗಮನವು ಭಾರತೀಯ ಸೇನಾ ಇತಿಹಾಸದ ಹೊಸ ಯುಗವಾಗಲಿದೆ ಎಂದು ಹೇಳಿದ್ದಾರೆ. ಈ ಬಹುಪಯೋಗಿ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯ ಸಾಮರ್ಥ್ಯಗಳಲ್ಲಿ ಕ್ರಾಂತಿಯನ್ನುಂಟು ಮಾಡಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಫ್ರಾನ್ಸ್ ನಿಂದ ಸುರಕ್ಷಿತವಾಗಿ ರಫೇಲ್ ಯುದ್ಧ ವಿಮಾನಗಳನ್ನು ಭಾರತಕ್ಕೆ ತಂದ ಭಾರತೀಯ ವಾಯುಸೇನೆಯ ಪೈಲಟ್ ಗಳನ್ನು ರಾಜನಾಥ್ ಸಿಂಗ್ ಶ್ಲಾಘಿಸಿದ್ದು, ವಾಯುಸೇನೆಯ ೧೭ನೇ ಸ್ಕ್ವಾಡ್ರನ್ ಮತ್ತು ಗೋಲ್ಡನ್ ಆರೋಸ್ ನ ವೃತ್ತಿಪರತೆ ಮತ್ತು ಶೌರ್ಯ ಹೀಗೆ ಮುಂದುವರೆಯಲಿದೆ ಎಂದು ಆಶಿಸುತ್ತೇನೆ ಎಂದು ಹೇಳಿದರು.
ನಿಗದಿತ ಸಮಯಕ್ಕೆ ಸರಿಯಾಗಿ ಯುದ್ಧ ವಿಮಾನಗಳನ್ನು ತಯಾರಿಸಿಕೊಟ್ಟಿದ್ದಕ್ಕಾಗಿ ಧನ್ಯವಾದ ಹೇಳುತ್ತೇನೆ. ಕೊರೋನಾ ಸಾಂಕ್ರಾಮಿಕ ಸೇರಿದಂತೆ ಸಾಕಷ್ಟು ಸಮಸ್ಯೆಗಳ ಹೊರತಾಗಿಯೂ ಯುದ್ಧ ವಿಮಾನ ಮತ್ತು ಅವರ ಆಯುಧಗಳನ್ನು ನಿಗದಿತ ಸಮಯದಲ್ಲಿ ಭಾರತಕ್ಕೆ ಹಸ್ತಾಂತರಿಸಿದ್ದಕ್ಕಾಗಿ ಫ್ರಾನ್ಸ್ ಸರ್ಕಾರಕ್ಕೆ ರಾಜನಾಥ್ ಸಿಂಗ್ ಅವರು ಧನ್ಯವಾದ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೂ ಧನ್ಯವಾದ ಹೇಳಿರುವ ರಾಜನಾಥ್ ಸಿಂಗ್ ಅವರು, ರಫೇಲ್‌ಯುದ್ಧ ವಿಮಾನ ಖರೀದಿ ಸಾಧ್ಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿರ್ಧಾರದಿಂದ. ಅಂತಾರಾಷ್ಟ್ರೀಯ ಮತ್ತು ಅಂತರ್ ಸರ್ಕಾರಿ ಒಪ್ಪಂದಗಳನ್ನು ಏರ್ಪಡಿಸಿಕೊಳ್ಳುವ ಮೂಲಕ ಸೂಕ್ತ ಸಂದರ್ಭದಲ್ಲಿ ರಫೇಲ್‌ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಮಾಡಿದರು. ಆ ಮೂಲಕ ಸುರ್ಘ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಯುದ್ಧ ವಿಮಾನ ಖರೀದಿ ಪ್ರಕ್ರಿಯೆನ್ನು ತ್ವರಿತಗೊಳಿಸಿದರು. ಅವರ ಧೈರ್ಯ ಮತ್ತು ನಿರ್ಣಾಯಕತೆಗಾಗಿ ನಾನು ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!