ನವದೆಹಲಿ: ಭಾರಿ ಚರ್ಚೆಗೆ ಕಾರಣವಾಗಿರುವ ನಟ ಸುಶಾಂತ್ ಸಿಂಗ್ ನಿಗೂಢ ಸಾವಿನ ಸುದ್ದಿ ಸಂಸತ್ತಿಗೂ ತಲುಪಿದ್ದು, ಸೋಮವಾರ ಸಂಸತ್ ಭವನದ ಮುಂದೆ ಮಹಾಭಾರತ ಧಾರಾವಾಹಿಯ ‘ದ್ರೌಪದಿ’ ಖ್ಯಾತಿಯ ನಟಿ, ರಾಜ್ಯಸಭಾ ಸದಸ್ಯೆ ಬಿಜೆಪಿಯ ರೂಪಾ ಗಂಗೂಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.
ಈ ಮೂಲಕ ಅವರು ಬಾಲಿವುಡ್ ನಲ್ಲಿ ನಡೆಯುತ್ತಿರುವ ವಿಲಕ್ಷಣ ಬೆಳವಣಿಗೆ ವಿರುದ್ಧ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.
ಸಂಸತ್ ಭವನದ ಹೊರಗೆ ಕುಳಿತ ಅವರು ಕೈಯಲ್ಲಿ ಕಾರ್ಡ್ ಹಿಡಿದು ಬಾಲಿವುಡ್ ಬೆಳವಣಿಗೆ ಕುರಿತು ಪ್ರತಿಭಟನೆ ತೋರಿದ್ದಾರೆ.