ಮುಂಬೈ: ಸುಶಾಂತ್ ಸಿಂಗ್ ಸಾವಿನ ತನಿಖೆಯಲ್ಲಿ ದಿನ್ಕಕೊಂದು ಹೊಸ ಹೊಸ ವಿಷಯಗಳು ಹೊರಬಿಳ್ಳುತ್ತಿದೆ.
ಹೌದು, ಇದೀಗ ಸುಶಾಂತ್ ಸಿಂಗ್ ಸಾವಿನ ತನಿಖೆಯಲ್ಲಿ ಮತ್ತೊಂದು ಹೊಸ ವಿಷಯ ಹೊರಬಿದ್ದಿದೆ. ಜೂನ್ 14ರಂದು, ಅಂದರೆ ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವ ಒಂದೇ ದಿನ ಮೊದಲು ರಿಯಾ ಚರ್ಕವರ್ತಿ, ಸುಶಾಂತ್ನನ್ನು ಭೇಟಿಯಾಗಿದ್ದರು ಎಂಬ ಹೊಸದೊಂದು ವಿಚಾರ ಬಹಿರಂಗವಾಗಿದೆ.
ಆದರೆ ಈ ಮೊದಲು ರಿಯಾ ತಾವು ಜೂನ್ 8ರಂದೇ ಸುಶಾಂತ್ ಮನೆಯನ್ನು ತೊರೆದಿದ್ದಾಗಿ ಹೇಳಿದ್ದರು. ಅದಾದ ಬಳಿಕ ಸುಶಾಂತ್ ಸಿಂಗ್ ಮನೆಗೆ ರಿಯಾ ಹೋಗಿಲ್ಲ ಎಂಬುದನ್ನೇ ಹೇಳುತ್ತಾ ಬಂದಿದ್ದರು, ಹಾಗು ಅದನ್ನೇ ಸತ್ಯವೆಂದು ನಂಬಿಕೊಳ್ಳಲಾಗಿತ್ತು.
ಆದರೆ ಇದೀಗ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಜೂನ್ 13ರಂದು ರಿಯಾ ಮತ್ತು ಸುಶಾಂತ್ ಭೇಟಿ ಮಾಡಿದ್ದರು ಎಂದು ಹೇಳಲಾಗಿದೆ. ಅದಕ್ಕೆ ಪುಷ್ಟಿ ನೀಡುವಂತೆ ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಕೂಡ ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಹಾಕಿದ್ದಾರೆ.
ಈ ಹಿನ್ನೆಲೆ ಸಾವಿನ ಕೇಸಿನಲ್ಲಿ ಹೊಸ ಟ್ವಿಸ್ಟ್ ಸಿಕ್ಕಂತಾಗಿದೆ. ಇನ್ನು ರಿಯಾ ಸುಶಾಂತ್ರನ್ನು 13ನೇ ತಾರೀಕಿನಂದು ಭೇಟಿ ಮಾಡಿದ್ದನ್ನು ನೋಡಿದವರೇ ದೃಢಪಡಿಸಿದ್ದಾರೆ. ಇದರಿಂದ ಆ ರಾತ್ರಿ ಅಲ್ಲಿ ನಡೆದದ್ದೇನು? ಮರುದಿನ ಬೆಳಗ್ಗೆಯೇ ನನ್ನ ಸೋದರ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ? ಈ ಸತ್ಯ ಹೊರಬೀಳಬೇಕು. ಸೂಕ್ತ ತನಿಖೆ ಆಗಬೇಕು ಎಂದು ಸಹೋದರಿ ಒತ್ತಾಯಿಸಿದ್ದಾರೆ.
ಇನ್ನು ಮುಂಬೈನ ಬಿಜೆಪಿ ಕಾರ್ಯದರ್ಶಿ ವಿವೇಕಾನಂದ ಗುಪ್ತಾ ಕೂಡ ಈ ಬಗ್ಗೆ’ಹೇಳಿದ್ದು, ಸುಶಾಂತ್ ಸಿಂಗ್ ಮತ್ತು ರಿಯಾ ಚಕ್ರವರ್ತಿ ಜೂ.13ರಂದು ಭೇಟಿಯಾಗಿದ್ದಾರೆ ಎಂಬುದನ್ನು ಅವರು ಒಟ್ಟಿಗೆ ಇದ್ದುದನ್ನು ನೋಡಿದವರೇ ನನಗೆ ಹೇಳಿದ್ದಾರೆ . ಅಲ್ಲದೆ, ಅಂದು ತಡರಾತ್ರಿ ಸುಶಾಂತ್ ಅವರೇ ರಿಯಾರನ್ನು ಡ್ರಾಪ್ ಮಾಡಲು ಆಕೆಯ ಮನೆವರೆಗೂ ಹೋಗಿದ್ದರು ಎಂಬ ಸತ್ಯವೂ ಗೊತ್ತಾಗಿದೆ ಎಂದು ಪ್ರತಿಪಾದಿಸಿದ್ದರು.