Sunday, June 26, 2022

Latest Posts

ಸುಶಾಂತ್‌ ಸಾವಿನ ಪ್ರಕರಣ ಸಿಬಿಐ ತನಿಖೆಗೆ: ಇದು ಮಾನವೀಯತೆ ಗೆಲುವು ಎಂದ ಕಂಗನಾ ರಣಾವತ್!

ಮುಂಬೈ: ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವಿನ ಪ್ರಕರಣವನ್ನು ಸುಪ್ರೀಂಕೋರ್ಟ್‌ ಸಿಬಿಐ ತನಿಖೆಗೆ ವಹಿಸುವಂತೆ ಅದೇಶ ಹೊರಡಿಸಿದ್ದು, ಈ ಬಗ್ಗೆ ಬಾಲಿವುಡ್‌ ಕ್ವೀನ್‌ ಕಂಗನಾ ರಣಾವತ್‌ ಇದು ಮಾನವೀಯತೆ ಗೆಲುವು ಎಂದಿದ್ದಾರೆ.
ದಿವಂಗತ ನಾಯಕ ನಟನಿಗೆ ನ್ಯಾಯ ಒದಗಿಸಬೇಕು ಸಿಬಿಐ ತನಿಖೆಗೆ ವಹಿಸಬೇಕೆಂದು ವಿಶ್ವದಾದ್ಯಂತ ಅಭಿಮಾನಿಗಳು ಮತ್ತು ಗೆಳೆಯರು ಒತ್ತಾಯಿಸುತ್ತಿದ್ದರು. ಸದ್ಯ ಈ ಪ್ರಕರಣವನ್ನ ಸಿಬಿಐ ತನಿಖೆ ವರ್ಗಾಯಿಸಲಾಗಿದೆ.
ಬಾಲಿವುಡ್ ನಟಿ ಕಂಗನಾ ಕೂಡ ಸುಶಾಂತ್‌ ಸಿಂಗ್‌ರದ್ದು ಆತ್ಮಹತ್ಯೆಯಲ್ಲ ಎಂದು ಹೋರಾಟಕ್ಕೆ ಇಳಿದಿದ್ರು. ಸಧ್ಯ ಸುಪ್ರೀಂ ತೀರ್ಪಿನ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದು,
ಇದು ಮಾನವೀಯತೆ ಗೆಲುವು, ಪ್ರತಿಯೊಬ್ಬ ಎಸ್‌ಎಸ್‌ಆರ್ ವಾರಿಯರ್ಸ್‌ಗೆ ಅಭಿನಂದನೆಗಳು, ನಾನು ಮೊದಲ ಬಾರಿಗೆ ಸಾಮೂಹಿಕ ಪ್ರಜ್ಞೆಯ ಬಲವಾದ ಶಕ್ತಿ ಅನುಭವಿಸಿದೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss