Tuesday, August 16, 2022

Latest Posts

ಸುಶಾಂತ್‌ ಸಿಂಗ್‌ ‌ಆತ್ಮಹತ್ಯೆ ಪ್ರಕರಣ: ಸಲ್ಮಾನ್‌ ಖಾನ್‌ ಸಹಿತ 8 ಮಂದಿ ವಿರುದ್ಧ ಕೇಸ್ ದಾಖಲು!

ಮುಜಾಫರ್‌ಪುರ್ (ಬಿಹಾರ)‌: ಬಾಲಿವುಟ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣ ಸಂಬಂಧ ನಟ ಸಲ್ಮಾನ್‌ ಖಾನ್‌ ಸಹಿತ 8 ಮಂದಿ ವಿರುದ್ಧ ಮುಜಾಫರ್‌ಪುರ್‌ ಕೋರ್ಟ್‌ನಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ.
ಹೌದು, ಸಲ್ಮಾನ್‌ ಖಾನ್‌ ಜೊತೆಗೆ ನಿರ್ಮಾಪಕ-ನಿರ್ದೇಶಕ ಕರಣ್‌ ಜೋಹರ್‌, ಆದಿತ್ಯ ಚೋಪ್ರಾ, ಸಾಜಿದ್ ನಾಡಿಯಾಡ್ವಾಲಾ, ಸಂಜಯ್‌ ಲೀಲಾ ಭನ್ಸಾಲಿ, ಏಕ್ತಾ ಕಪೂರ್‌, ಭೂಷಣ್‌ ಕುಮಾರ್‌ ಮತ್ತು ನಿರ್ದೇಶಕ ದಿನೇಶ್‌ ಅವರ ಹೆಸರುಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲಾ ಆರೋಪಿಗಳು ಅಕ್ಟೋಬರ್‌ 7ರೊಳಗೆ ಕೋರ್ಟ್‌ಗೆ ಹಾಜರಾಗಬೇಕೆಂದು ಇಲ್ಲಿನ ಸ್ಥಳೀಯ ನ್ಯಾಯಾಲಯ ಸೂಚಿಸಿದೆ.
ಸುಶಾಂತ್‌ ಆತ್ಮಹತ್ಯೆಗೆ ಈ 8 ಮಂದಿ ಕಾರಣರಾಗಿದ್ದಾರೆ ಎಂದು ಆರೋಪಿಸಿ ವಕೀಲ ಸುಧೀರ್‌ ಕುಮಾರ್‌ ಓಜಾ ಎಂಬುವರು, ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ಗೆ ದೂರು ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss