spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸುಶಾಂತ್ ಆತ್ಮಹತ್ಯೆ: ಸಲ್ಲೂ ಸಹಿತ ಬಾಲಿವುಡ್‌ನ ಸ್ಟಾರ್ ಕಲಾವಿದರ ವಿರುದ್ಧ ಪ್ರಕರಣ ದಾಖಲು!

- Advertisement -Nitte

ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬೆನ್ನಲ್ಲೆ ಬಾಲಿವುಡ್‌ನ ಕೆಲ ಸ್ಟಾರ್ ಕಲಾವಿದರು ಮತ್ತು ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಕರಣ್ ಜೋಹರ್, ಸಂಜಯ್ ಲೀಲಾ ಭನ್ಸಾಲಿ, ಸಲ್ಮಾನ್ ಖಾನ್ ಮತ್ತು ಏಕ್ತಾ ಕಪೂರ್ ಸೇರಿದಂತೆ ಚಿತ್ರರಂಗದ ಎಂಟು ಸದಸ್ಯರ ವಿರುದ್ಧ ಬಿಹಾರದ ಮುಜಾಫರ್​ಪುರ್​ ಕೋರ್ಟ್​ನಲ್ಲಿ ವಕೀಲ ಸುಧೀರ್ ಕುಮಾರ್ ಓಜಾ ಪ್ರಕರಣ ದಾಖಲಿಸಿದ್ದಾರೆ.
ಸೆಕ್ಷನ್ ೩೦೬, ೧೦೯, ೫೦೪ ಮತ್ತು ೫೦೬ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಜುಲೈ ೩ರಂದು ವಿಚಾರಣೆಗೆ ಸಮಯ ನಿಗದಿ ಮಾಡಲಾಗಿದೆ.
ಈ ವ್ಯಕ್ತಿಗಳು ಸುಶಾಂತ್ ನಟನೆಯ ಸಿನಿಮಾಗಳ ಬಿಡುಗಡೆಯನ್ನು ತಡೆ ಹಿಡಿದಿದ್ದರು. ಅದಕ್ಕಾಗಿ ಸಂಚು ರೂಪಿಸಿದ್ದರು. ಸಿನಿಮಾ ಸಂಬಂಧಿ ಸಮಾರಂಭಗಳಿಗೆ ಸುಶಾಂತ್‌ರನ್ನು ಆಹ್ವಾನಿಸುತ್ತಿರಲಿಲ್ಲ ಎಂಬುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss