Saturday, August 13, 2022

Latest Posts

ಸುಶಾಂತ್ ಕಾಲು ಮುರಿದಿತ್ತು, ಇದು ಕೊಲೆ ಎಂದು ವೈದ್ಯರು ಎಂದಿದ್ದರು: ಆಸ್ಪತ್ರೆ ಸಿಬ್ಬಂದಿಯಿಂದ ಸ್ಫೋಟಕ ಮಾಹಿತಿ

ಮುಂಬೈ: ಬಾಲಿವುಡ್ ದಿವಂಗತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ಸುತ್ತ ಅನುಮಾನದ ಹುತ್ತ ಬೆಳೆಯುತ್ತಿರುವಂತೆಯೇ ಮತ್ತೊಂದು ಸ್ಫೋಟಕ ವಿಷಯ ಹೊರಬಿದ್ದಿದೆ .

ಸುಶಾಂತ್‌ ಸಿಂಗ್‌ ಮೃತದೇಹವನ್ನು ಆಸ್ಪತ್ರೆಗೆ ಕರೆತಂದ ಸಂದರ್ಭದಲ್ಲಿ ಅವರ ಒಂದು ಕಾಲು ಮುರಿದಿತ್ತು ಹಾಗೂ ತಿರುಚಿತ್ತು. ಮೃತದೇಹವನ್ನು ಪರಿಶೀಲಿಸಿದ್ದ ಹಿರಿಯ ವೈದ್ಯರು ದೇಹದಲ್ಲಿರುವ ಗಾಯದ ಗುರುತುಗಳನ್ನು ನೋಡಿ ಇದು ಕೊಲೆ ಎಂದು ಸ್ಪಷ್ಟವಾಗಿ ಹೇಳಿದ್ದರು, ಆದರೆ ಪೊಲೀಸರು ಸುಶಾಂತ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದರು…’

ಈ ರೀತಿ ಸುಶಾಂತ್ ಸಿಂಗ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಕೂಪರ್ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ನೀಡಿರುವ ಹೇಳಿಕೆ ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿದೆ.

ಈ ಬಗ್ಗೆ ಕೂಪರ್‌ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ‘ನ್ಯೂಸ್‌ ನೇಷನ್‌’ಗೆ ನೀಡಿದ ಸಂದರ್ಶನದ ತುಣುಕೊಂದನ್ನು ಸುಶಾಂತ್‌ ಸಿಂಗ್‌ ಸಹೋದರಿ ಶ್ವೇತಾ ಸಿಂಗ್‌ ಕೀರ್ತಿ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಅಯ್ಯೊ ದೇವರೇ, ಈ ಸುದ್ದಿಯನ್ನು ಕೇಳುವಾಗ ನನ್ನ ಹೃದಯ ಚೂರಾಗುತ್ತದೆ. ನನ್ನ ಸಹೋದರನಿಗೆ ಅವರು ಏನೇನು ಮಾಡಿದ್ದಾರೊ.. ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸಿ’ ಎಂದು ಟ್ವಿಟರ್‌ನಲ್ಲಿ ಶ್ವೇತಾ ಸಿಂಗ್‌ ಬರೆದಿದ್ದಾರೆ.

ಸದ್ಯ ಸಿಬಿಐ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಈ ಸಂಬಂಧ ಸುಶಾಂತ್ ಮಾಜಿ ಗೆಳತಿ ರೀಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೌಕಿ ಚಕ್ರವರ್ತಿಯನ್ನು ವಿಚಾರಣೆ ನಡೆಸಿದ್ದಾರೆ. ಇಡಿ ಮತ್ತು ಮಾದಕ ದ್ರವ್ಯ ನಿಗ್ರಹ ದಳ ಕೂಡಾ ರಿಯಾ ಚಕ್ರವರ್ತಿಯ ವಿಚಾರಣೆ ನಡೆಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss