Tuesday, July 5, 2022

Latest Posts

ಸುಶಾಂತ್ ತನಿಖೆ ಸಿಬಿಐಗೆ ಒಪ್ಪಿಗೆ, ತನಿಖೆ ಬಗ್ಗೆ ಪ್ರೇಯಸಿ ರಿಯಾ ಚಕ್ರವರ್ತಿ ಹೇಳಿದ್ದೇನು ಗೊತ್ತಾ?

ಬಾಲಿವುಡ್  ನಟ  ಸುಶಾಂತ್ ಸಿಂಗ್  ರಜಪೂತ್  ಪ್ರಕರಣವನ್ನು  ಸುಪ್ರೀಂ  ಕೋರ್ಟ್  ಸಿಬಿಐಗೆ  ಒಪ್ಪಿಸಿದೆ.   ಈ ಮೊದಲ  ಈ  ವಿಚಾರವಾಗಿ  ಲಕ್ಷಾಂತರ  ಮಂದಿ  ಪ್ರಸ್ತಾಪ ಮಾಡಿದ್ದರು.  ಇದೀಗ  ಅವರ  ಆಶಯದಂತೆ ನಡೆದಿದೆ.

ಸುಪ್ರೀಂ ಕೋರ್ಟ್ ಈ ಬಗ್ಗೆ ಆದೇಶ ಹೊರಡಿಸಿದ್ದು, ಸುಶಾಂತ್ ಸಾವಿಗೆ ಸಂಬಂಧಿಸಿದ ಎಲ್ಲ ಪ್ರಕರಣವನ್ನು ಸಿಬಿಐ ಅಧಿಕಾರಿಗಳೇ ತನಿಖೆ ಮಾಡಬೇಕು ಎಂದು ತೀರ್ಪು ನೀಡಿದೆ. ಈ ಬಗ್ಗೆ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಪ್ರತಿಕ್ರಿಯೆ  ನೀಡಿದ್ದಾರೆ.

ರಿಯಾ ಪರವಾಗಿ ಅವರ ವಕೀಲರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ’ಈವರೆಗೂ ಮುಂಬೈ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ತನಿಖೆಯಲ್ಲಿ ಸಹಕರಿಸಿದ ರೀತಿಯೇ ಸಿಬಿಐ ತಂಡಕ್ಕೂ ರಿಯಾ ಸಹಕರಿಸಲಿದ್ದಾರೆ. ಯಾವ ಏಜೆನ್ಸಿಯಿಂದ ತನಿಖೆ ನಡೆದರೂ ಸತ್ಯ ಬದಲಾಗುವುದಿಲ್ಲ. ರಿಯಾ ಕೂಡ ಸಿಬಿಐ ತನಿಖೆಗೆ ಈ ಮೊದಲೇ ಮನವಿ ಮಾಡಿಕೊಂಡಿದ್ದರಿಂದ ಇದು ಅವರ ಗೆಲುವು ಇದ್ದಂತೆ’ ಎಂದು ಲಾಯರ್ ಸತೀಶ್ ಮಾನೆಶಿಂದೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.ಎರಡೂ ರಾಜ್ಯಗಳ ರಾಜಕೀಯ ಆರೋಪ-ಪ್ರತ್ಯಾರೋಪಗಳ ಹಸ್ತಕ್ಷೇಪ ಇರುವುದರಿಂದ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದು ಸೂಕ್ತ ಎಂದು ಕೂರ್ಟ್ ಹೇಳಿದೆ.

ಸಂವಿಧಾನದ ೧೪೨ನೇ ಆರ್ಟಿಕಲ್ ನೀಡಿದ ಅಧಿಕಾರ ಬಳಸಿ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ. ಸಿಬಿಐ ಅಧಿಕಾರಿಗಳ ಎದುರು ರಿಯಾ ವಿಚಾರಣೆಗೆ ಹಾಜರಾಗಲಿದ್ದಾರೆ’ ಎಂದು ಲಾಯರ್ ಸತೀಶ್ ಮಾನೆಶಿಂದೆ ಹೇಳಿದ್ದಾರೆ. ಕೋರ್ಟ್ ತೀರ್ಪು ಬಂದ ಬಳಿಕ ಕಂಗನಾ ರಣಾವತ್, ಅಕ್ಷಯ್ ಕುರ್ಮಾ, ಅಂಕಿತಾ ಲೋಖಂಡೆ, ಕೃತಿ ಸನೋನ್, ಪರಿಣೀತಿ ಚೋಪ್ರಾ ಸೇರಿದಂತೆ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಟ್ವೀಟ್ ಮಾಡಿದ್ದು, ’‘ಧನ್ಯವಾದಗಳು ದೇವರೆ! ನಮ್ಮ ಪ್ರಾರ್ಥನೆಗೆ ನೀನು ಉತ್ತರ ನೀಡಿದ್ದೀಯ. ಆದರೆ ಇದು ಆರಂಭ ‘ ಮಾತ್ರ. ಸತ್ಯದ ಕಡೆಗೆ ಮೊದಲ ಹೆಜ್ಜೆ. ನಾವು ಮುಂದುವರೆಯುತ್ತೇವೆ’ ಎಂದು ಅವರು ಬರೆದುಕೊಂಡಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss