ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ನ್ಯಾಯಾಂಗ
ಬಂಧನದಲ್ಲಿದ್ದ ನಟಿ ರಿಯಾ ಚಕ್ರವರ್ತಿ ಇತ್ತೀಚಿಗೆ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದೀಗ ರಿಯಾ ತನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದವರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ರಿಯಾ ಇತ್ತೀಚಿಗೆ ತನ್ನ ಪಕ್ಕದ ಮನೆಯವರಾದ ಡಿಂಪಲ್ ಥವಾನಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಜೂನ್ ೧೩ರಂದು ಸುಶಾಂತ್ ಸಿಂಗ್ ಅವರನ್ನು ರಿಯಾ
ಭೇಟಿಯಾಗಿದ್ದರು ಎಂದು ಹೇಳಿಕೆ ಕೊಟ್ಟಿದ್ದರು. ಈ ಬಗ್ಗೆ ರಿಯಾ ಎಸ್ ಐ ಟಿ ಮತ್ತು ಸಿಬಿಐನ ಸೂಪರಿಟೆಂಡೆಂಟ್ ನೂಪುರ್ ಪ್ರಸಾದ್ ಅವರಿಗೆ ಪತ್ರ ಬರೆದು ಅದರಲ್ಲಿ ಡಿಂಪಲ್ ತನಿಖೆಯ ದಾರಿ ತಪ್ಪಿಸಲು ಸುಳ್ಳು ಮತ್ತು ನಕಲಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ನಡವಳಿಕೆ ಭಾರತೀಯ ದಂಡ ಸಂಹಿತೆ ಸೆಕ್ಷನ್ ೨೦೩ ಮತ್ತು ೨೧೧ರ ಅಡಿ ಶಿಕ್ಷಾರ್ಹ ಅಪರಾಧವಾಗುತ್ತೆ ಎಂದು ಉಲ್ಲೇಖಿಸಿದ್ದಾರೆ. ’ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿದಂತೆ ಸಿ ಬಿ ಐ ನನ್ನನ್ನು ೫ ದಿನಗಳಿಂತ ಹೆಚ್ಚು ಕಾಲ ವಿಚಾರಣೆಗೊಳಪಡಿಸಿದೆ ಎಂದು ನಾನು ಹೇಳುತ್ತೇನೆ. ತನಿಖೆಯ ಸಮಯದಲ್ಲಿ ಹಲವಾರು ಮಾ ಧ್ಯಮಗಳು ಸುಳ್ಳು ಮತ್ತು ನಕಲಿ ಕಥೆಗಳನ್ನು ಕಟ್ಟಿ ಬಿತ್ತರಮಾಡಿ, ತಮ್ಮದೆ ಆದ ಉದ್ದೇಶ ಸಾಧಿಸಿವೆ.’ ಎಂದು ದೂರಿನಲ್ಲಿ ತಿಳಿಸಿದ್ದಾರೆ.