Wednesday, August 17, 2022

Latest Posts

ಸುಶಾಂತ್ ಸಾವಿನ ಬಗ್ಗೆ ಆ ಸಹಾಯಕ ಬಿಚ್ಚಿಟ್ಟಿದ್ದು ಏನು ಗೊತ್ತಾ, ನಟನ ಸಾವು ಕೊಲೆಯೋ? ಆತ್ಮಹತ್ಯೆಯೋ? ಇಲ್ಲಿದೆ ಸಂಪೂರ್ಣ ವಿವರ

ನಟ  ಸುಶಾಂತ್  ಸಿಂಗ್  ರಜಪೂತ್  ಸಾವಿನ  ಪ್ರಕರಣ  ಚರ್ಚೆ  ಬಾಲಿವುಡ್  ಅಂಗಳದಲ್ಲಿ  ಜೋರಾಗಿ  ನಡೆಯುತ್ತಿದೆ.

ಮರಣೋತ್ತರ ಪರೀಕ್ಷೆ ವರದಿಯಲ್ಲಿ ಪ್ರಕಾರ ಇದು ಆತ್ಮಹತ್ಯೆ ಎಂದು ಹೇಳಲಾಗಿದೆ. ಮುಂಬೈ ಪೊಲೀಸರು ಕೂಡ ಇದನ್ನು ಆತ್ಮಹತ್ಯೆ ಎಂದೇ ಹೇಳಿದ್ದಾರೆ. ಆದರೆ ಬೇರೊಂದು ಆಯಾಮದಿಂದ ನೋಡಿದರೆ ಇದು ಕೊಲೆಯೂ ಆಗಿರಬಹುದು ಎಂಬ ಅನುಮಾನ ಮೂಡುತ್ತಿದೆ.

ಯಾವುದೇ ಸಾವಿನ ಪ್ರಕರಣದಲ್ಲೂ ಮೊದಲ ಬಾರಿಗೆ ಮೃತ ದೇಹವನ್ನು ನೋಡಿದವರ ಸಾಕ್ಷಿ ಮುಖ್ಯವಾಗುತ್ತದೆ. ಸುಶಾಂತ್ ಜೂ.೧೪ರಂದು ಶವವಾಗಿ ಪತ್ತೆಯಾದಾಗ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಆಂಬ್ಯುಲೆನ್ಸ್ ಸಹಾಯಕ ಕಂಡಿದ್ದಾನೆ. ಆತ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದು, ಸುಶಾಂತ್ ದೇಹದ ಮೇಲೆ ಅನುಮಾನಾಸ್ಪದವಾದ ಕಲೆಗಳನ್ನು ತಾನು ನೋಡಿರುವುದಾಗಿ ತಿಳಿಸಿದ್ದಾನೆ. ಆತನ ಹೇಳಿಕೆ ಎಲ್ಲರ ಗಮನ ಸೆಳೆಯುತ್ತಿದೆ.

ಆತ್ಮಹತ್ಯೆ ಮಾಡಿಕೊಂಡವರ ಅನೇಕ ದೇಹಗಳನ್ನು ನೋನು ನೋಡಿದ್ದೇನೆ. ಅವು ಹಳದಿ ಬಣ್ಣಕ್ಕೆ ತಿರುಗಿರುವುದಿಲ್ಲ. ಆದರೆ ಸುಶಾಂತ್ ದೇಹ ಹಳದಿ ಆಗಿತ್ತು. ಕಾಲುಗಳು ವಿಚಿತ್ರವಾಗಿ ಬಾಗಿದ್ದವು. ಕಾಲುಗಳ ಮೇಲೂ ಕಲೆಗಳು ಆಗಿದ್ದವು. ಕುತ್ತಿಗೆಯಲ್ಲಿದ್ದ ಹಗ್ಗದ ಕಲೆ ಕೂಡ ಅರ್ಧಂಬರ್ಧ ಇತ್ತು. ನೇಣು ಬಿಗಿದುಕೊಂಡವರ ಕುತ್ತಿಗೆ ಸುತ್ತ ಪೂರ್ತಿ ಕಲೆ ಆಗುತ್ತದೆಯೇ ಹೊರತು ಈ ರೀತಿ ಅರ್ಧಂಬರ್ಧ ಇರುವುದಿಲ್ಲ’ ಎಂದು ಆಂಬ್ಯುಲೆನ್ಸ್ ಸಹಾಯಕ ಹೇಳಿದ್ದಾನೆ.

ಈ ವಿಚಾರ ಹೊರಬಂದ ಬಳಿಕ ಘಟನೆ ಬಗ್ಗೆ ಅನುಮಾನ ಹೆಚ್ಚಾಗಿದೆ. ಪ್ರಕರಣದಲ್ಲಿ ಈ ಆಂಬ್ಯುಲೆನ್ಸ್ ಸಹಾಯಕನ ಹೇಳಿಕೆ ಅತಿ ಮುಖ್ಯ ಆಗಲಿದೆ. ಪ್ರಸ್ತುತ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ತನಿಖೆಗೆ ಸಂಬಂಧಿಸಿದಂತೆ ಮುಂಬೈ ಮತ್ತು ಬಿಹಾರ ಪೊಲೀಸರ ನಡುವೆ ಜಟಾಪಟಿ ಏರ್ಪಟ್ಟಿತ್ತು. ಮುಂಬೈ ಪೊಲೀಸರು ಸರಿಯಾಗಿ ಪ್ರಾಥಮಿಕ ತನಿಖೆ ನಡೆಸಿಲ್ಲ ಎಂಬ ಆರೋಪ ಕೇಳಿಬಂದಿತ್ತು.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!