Thursday, August 11, 2022

Latest Posts

ಸುಶಾಂತ್ ಸಿಂಗ್‌ರದ್ದು ಆತ್ಮಹತ್ಯೆಯಲ್ಲ,ಕೊಲೆ:  ಸಂಸದ ಸುಬ್ರಮಣಿಯನ್ ಸ್ವಾಮಿ ಟ್ವೀಟ್

ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆಯುತ್ತಿದ್ದು, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಸಂಸದ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಇದು ಕೊಲೆ ಎನ್ನಲು ಬಹಳಷ್ಟು ಸಾಕ್ಷಿಗಳಿವೆ ಎಂದು ಬರೆದುಕೊಂಡಿದ್ದಾರೆ. ಸುಶಾಂತ್ ಕುತ್ತಿಗೆಯ ಮೇಲಿದ್ದ ಗುರುತು, ಆತ್ಮಹತ್ಯೆಗೆ ಹೋಲಿಕೆಯಿಲ್ಲ. ಆದರೆ ನರಹತ್ಯೆಗೆ ಹೋಲಿಕೆಯಾಗಿದೆ.ಸಿಸಿಟಿವಿ ಕ್ಯಾಮೆರಾ ಮಿಸ್ ಆಗಿದೆ.ದೇಹದ ಮೇಲಿರುವ ಉಳಿದ ಗಾಯದ ಕಲೆಗಳು, ರೂಮಿನ ಡೂಪ್ಲಿಕೇಟ್ ಕೀ ಕಳುವಾಗಿರುವುದು, ಆತನಿಗೆ ಆರ್ಥಿಕ ಸಮಸ್ಯೆ ಇಲ್ಲದಿರುವುದು,ಪದೇ ಪದೆ ಸಿಮ್ ಕಾರ್ಡ್ ಬದಲಿಸಿರುವುದು ಈ ಎಲ್ಲ ಅಂಶಗಳನ್ನು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss