ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಮತ್ತೊಂದು ಆಶ್ಚರಿ ವಿಷಯ ಇದೀಗ ಹೊರಗೆ ಬಿದ್ದಿದೆ.
ಸುಶಾಂತ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಅಧ್ಯಾತ್ಮ ಗುರು ಮೋಹನ್ ಸದಾಶಿವ ಜೋಶಿ ಅವರು ವಿಚಾರ ಬೆಳಕಿಗೆ ಬಂದಿದೆ. ಸುಶಾಂತ್ ಸಿಂಗ್ ಅವರಿಗೆ ಚಿಕಿತ್ಸೆ ಕೊಡಿಸಲು ರಿಯಾ ಚಕ್ರವರ್ತಿ ಅಧ್ಯಾತ್ಮ ಗುರು ಮೋಹನ್ ಸದಾಶಿವ ಜೋಶಿ ಅವರನ್ನು ‘
ಭೇಟಿ ಮಾಡಿದ್ದರು ಎಂಬ ವಿಷಯ ವರದಿಯಾಗಿದೆ. ’ಸುಶಾಂತ್ಗೆ ಚಿಕಿತ್ಸೆ ನೀಡಿ ಎಂದು ನನ್ನನ್ನು ರಿಯಾ ಹಲವು ಬಾರಿ ಭೇಟಿ ಮಾಡಿದ್ದರು’ ಎಂದು ಸ್ವತಃ ಸದಾಶಿವ ಜೋಶಿ ಹೇಳಿದ್ದಾರೆ
ಸುಶಾಂತ್ ಸಿಂಗ್ ರಜಪೂತ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹಾಗಾಗಿ, ನಾನು ಅವರಿಗೆ ಚಿಕಿತ್ಸೆ ನೀಡಿದ್ದೇನೆ. ಖುದ್ದು ರಿಯಾ ಚಕ್ರವರ್ತಿ ನನ್ನನ್ನು ಸಂಪರ್ಕಿಸಿ ಸುಶಾಂತ್ ಬಗ್ಗೆ ಹೇಳಿದ್ದರು. ಬಳಿಕ, ನಾನು ಚಿಕಿತ್ಸೆ ಆರಂಭಿಸಿದ್ದೆ. ಶೇಕಡಾ ೯೦ ರಷ್ಟು ಅವರು ಚೇತರಿಸಿಕೊಂಡಿದ್ದರು’ ಎಂದು ಅ ಧ್ಯಾತ್ಮ ಗುರು ಮೋಹನ್ ಸದಾಶಿವ ಜೋಶಿ ತಿಳಿಸಿದ್ದಾರೆ.
ಸುಶಾಂತ್ ಸಿಂಗ್ ನನ್ನನ್ನು ಎರಡು ಸಲ ಭೇ ಟಿ ಮಾಡಿದ್ದರು. ತಾನು ಎದುರಿಸುತ್ತಿದ್ದ ಸಮಸ್ಯೆಗಳನ್ನು ನನ್ನ ಬಳಿ ಹೇಳಿಕೊಂಡಿದ್ದರು ಎಂಬ ವಿಚಾರವನ್ನು ಅ ಧ್ಯಾತ್ಮ ಗುರು ಬಹಿರಂಗಪಡಿಸಿದ್ದಾರೆ. ಸುಶಾಂತ್ ಕುರಿತು ರಿಯಾ ಚಕ್ರವರ್ತಿ ಬಿಟ್ಟರೆ ಬೇರೆ ಯಾರೂ ನನ್ನ ಬಳಿ ಚರ್ಚಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಸುಶಾಂತ್ ಸಾವಿನ ತನಿಖೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ನನಗೆ ಸಮನ್ಸ್ ನೀಡಿದ್ದರು. ಅವರ ಆರೋಗ್ಯ ಸ್ಥಿತಿ ಮತ್ತು ಪರಿಚಯ ಬಗ್ಗೆ ಮಾಹಿತಿ ಪಡೆಯಲು ಠಾಣೆಗೆ ಬರುವಂತೆ ಸೂಚಿಸಿದ್ದರು. ಆದರೆ, ಅನಾರೋಗ್ಯ ಕಾರಣ ನಾನು ಹೋಗಿರಲಿಲ್ಲ ಎಂದು ಹೇಳಿದ್ದಾರೆ.