ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೆಲ್ಲ ಒಂದು ಸುದ್ದಿಗಳು ಹೊರಗೆ ಬೀಳುತ್ತಲೇ ಇದೆ. ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಬಗ್ಗೆ ಸಾಕಷ್ಟು ವಿಷಯಗಳು ಒಂದಾದ ಮೇಲೆ ಒಂದರಂತೆ ಹೊರಬೀಳುತ್ತಿವೆ.
ರಿಯಾ ಮಾಟ-ಮಂತ್ರ ಕೂಡ ಮಾಡಿಸಿದ್ದರು ಎಂದು ಹೇಳಲಾಗುತ್ತಿದೆ. ಮಾಟ-ಮಂತ್ರವನ್ನು ವಾಮಾಚಾರ, ಎಂದು ಹೀಗೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಇದು ಮೂಢನಂಬಿಕೆ ಎಂದು ಕೆಲವರು ದೂರಿದರೆ, ಇನ್ನೂ ಕೆಲವರು ಇದನ್ನೇ ನಂಬುತ್ತಾರೆ. ಇಂದು ಕೂಡ ಈ ಪದ್ಧತಿ ಅಸ್ತಿತ್ವದಲ್ಲಿದೆ. ಇದನ್ನೇ ರಿಯಾ ಚಕ್ರವರ್ತಿಯವರು ಸುಶಾಂತ್ ಸಿಂಗ್ ರಜಪೂತ್ ವಿಚಾರದಲ್ಲಿ ಮಾಟ-ಮಂತ್ರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್ ಸಿಂಗ್ ರಜಪೂತ್ ತಂದೆ ಕೆಕೆ ಸಿಂಗ್ ಪೊಲೀಸ್ ದೂರು ನೀಡಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಮಾಜಿ ಆಫೀಸ್ ಬಾಯ್ ರಾಮ್, ’ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ರಿಯಾ ಚಕ್ರವರ್ತಿಗೆ ವಾಮಾಚಾರ ಗೊತ್ತಿತ್ತು. ಸುಶಾಂತ್ ಸಿಂಗ್ ಅವರ ಜೊತೆ ರಿಯಾ ಲಿವ್ ಇನ್ ರಿಲೇಶನ್ಶಿಪ್ನಲ್ಲಿ ಇರುವ ಬಗ್ಗೆ ಹೇಳಿದ್ದರು. ಸುಶಾಂತ್ ಅವರಿಗೆ ರಿಯಾ ಒಂದಷ್ಟು ಮಾತ್ರೆಗಳನ್ನು ನೀಡುತ್ತಿದ್ದರು. ರಿಯಾ ಬರುವ ಮುನ್ನ ಸುಶಾಂತ್ ತುಂಬ ಖುಷಿಯಿಂದಿದ್ದರು. ರಿಯಾರಿಂದಾಗಿ ಸುಶಾಂತ್ ಜೀವನ ಬದಲಾಯಿತು. ನನಗೆ ಸಂಬಳ ಕೊಡುವುದು ಲೇಟ್ ಆಗುತ್ತಿತ್ತು. ಹೆಚ್ಚಿನ ದಿನದ ಕೆಲಸ ಕೇಳಿದ್ದಕ್ಕೆ ನನ್ನ ಮೇಲೆ ದೌರ್ಜನ್ಯ ಮಾಡಿದರು. ರಿಯಾ ಅವರ ವೈಯಕ್ತಿಕ ಕೆಲಸ ಮಾಡುವಂತೆ ಹೇಳುತ್ತಿದ್ದರು. ಯಾರಾದರೂ ಅವರ ಮಾತು ಕೇಳದಿದ್ದರೆ ಜಗಳವಾಡುತ್ತಿದ್ದರು’ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಬ್ಯಾಂಕ್ ಖಾತೆಯಿಂದ ಪೂಜಾ ಸಾಮಗ್ರಿಗಾಗಿ ಸಿಕ್ಕಾಪಟ್ಟೆ ಹಣ ಖರ್ಚಾಗಿದೆ. ಲಕ್ಷಗಟ್ಟಲೇ ಹಣ ಸುರಿದು ರಿಯಾ ಮಾಟ ಮಂತ್ರ ಮಾಡಿಸಿದ್ದಾಳೆ. ಇನ್ನು ರಿಯಾ, ಸುಶಾಂತ್ ಸಿಂಗ್ರಿಂದ ಹಣ ದೋಚಿದ ಆರೋಪದ ಮೇಲೆ ಜಾರಿ ನಿರ್ದೇಶಾನಲಯ ದೂರು ದಾಖಲಿಸಿಕೊಂಡಿದೆ. ಸುಶಾಂತ್ ಸಿಂಗ್ ಆಪ್ತ ಸ್ನೇಹಿತೆ ಕ್ರಿಸನ್ ಬರೆಟ್ಟೋ ಕೂಡ ರಿಯಾ ಬ್ಲ್ಯಾಕ್ ಮಾಜಿಕ್ ಮಾಡಿದ್ದರ ಬಗ್ಗೆ ಮಾತನಾಡಿದ್ದಾರೆ. ಸುಶಾಂತ್ ರಿಯಾಗೆ ಹತ್ತಿರವಾಗುತ್ತಿದ್ದಂತೆ ಮಾಟ-ಮಂತ್ರ ಮಾಡಿ ಆಪ್ತರಿಂದ ಸುಶಾಂತ್ರನ್ನು ದೂರವಿಟ್ಟರು