Saturday, August 13, 2022

Latest Posts

ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಸಿಬಿಐ ಒಪ್ಪಿಸಲು ಬಿಹಾರ ಸಿಎಂ ಶಿಫಾರಸ್ಸು, ೧೦ ಪ್ರಮುಖ ಅಂಶಗಳು ಇಲ್ಲಿವೆ

ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆಗೆ   ಬಿಹಾರ  ಮುಖ್ಯಮಂತ್ರಿ ನಿತೀಶ್  ಕುಮಾರ್  ಸಹ  ಅಸಮಾಧಾನಾ  ಹೊರಗೆ  ಹಾಕಿದ್ದಾರೆ.

ಬಿಹಾರ್ ಸಿಎಂ ನಿತೀಶ್ ಕುಮಾರ್ ಅವರು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿ‘ನದ ಕೇಸ್‌ನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಹೇಳಿರುವುದರ ಜೊತೆಗೆ ಇದಕ್ಕೆ ೧೦ ಕಾರಣ ಕೂಡ ನೀಡಿದ್ದಾರೆ. ಸುಶಾಂತ್ ಕುಟುಂಬವು ಇದಕ್ಕೆ ಒಪ್ಪಿಗೆ ನೀಡಿದ್ದರಿಂದ, ಬಿಹಾರದಲ್ಲಿ ದಾಖಲಾದ ಎ್‌ಐಆರ್ ಕುರಿತು ಸಿಬಿಐ ತನಿಖೆಗೆ ನಿತೀಶ್ ಕುಮಾರ್ ಶಿಫಾರಸ್ಸು  ಮಾಡಿದ್ದಾರೆ.

ಸುಶಾಂತ್ ಅವರು ಸರಿಯಾಗಿ ಸಂಪರ್ಕಕ್ಕೆ ಸಿಗದೆ ಇರುವುದು ಕುಟುಂಬದವರಲ್ಲಿ ಅನುಮಾನ ಮೂಡಿಸಿತ್ತು. ಸುಶಾಂತ್ ಜೀವಕ್ಕೆ ಅಪಾಯವಿದೆ ಎಂದು ಫೆಬ್ರವರಿ ೨೫ರಂದೇ ಬಾಂದ್ರಾ ಪೊಲೀಸರಿಗೆ ಅವರು ಮಾಹಿತಿ ನೀಡಿದ್ದರು. ಆದರೆ ಪೊಲೀಸರು ಅದನ್ನು ಪರಿಗಣಿಸಿರಲಿಲ್ಲ ಎಂದು ಕುಟುಂಬ ಆರೋಪಿಸಿದೆ. ಮುಂಬೈನ ಪೊಲೀಸ್ ಅಧಿಕಾರಿಗೆ ಕಳುಹಿಸಿದ್ದ ವಾಟ್ಸಾಪ್ ಸಂದೇಶವನ್ನು ಕುಟುಂಬ ಬಹಿರಂಗಪಡಿಸಿದೆ.

ಸುಶಾಂತ್ ಸಿಂಗ್ ಬೈಪೊರ್ಲಾ ಡಿಸಾರ್ಡರ್ನಿಂದ ಬಳಲುತ್ತಿದ್ದರು. ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಸಾಯುವ ಮುನ್ನ ನೋವಿಲ್ಲದೆ ಸಾಯುವುದರ ಕುರಿತು ಗೂಗಲ್ನಲ್ಲಿ ಹುಡುಕಾಡಿದ್ದರು. ಇದು ಆತ್ಮಹತ್ಯೆ ಎಂದು ಮುಂಬೈ ಪೊಲೀಸರು ಹೇಳಿಕೆ ನೀಡಿದ್ದಾರೆ. ಆದರೆ ಇದರ ಸುತ್ತಲೂ ಅನೇಕ ಅನುಮಾನಗಳು ವ್ಯಕ್ತವಾಗಿವೆ. ಸುಶಾಂತ್ ಅವರ ಆಪ್ತರು ಎಂದು ಹೇಳಿಕೊಂಡಿದ್ದ ಅನೇಕರನ್ನು ಅವರು ವಿಚಾರಣೆ ಮಾಡಿಲ್ಲ. ಹಾಗೆಯೇ ಸುಶಾಂತ್ ಅವರ ಒಡನಾಡಿಗಳು ಸುಶಾಂತ್‌ಗೆ ಇತ್ತು ಎನ್ನಲಾದ ಮಾನಸಿಕ ಸಮಸ್ಯೆಯ ಆರೋಪವನ್ನು ತಳ್ಳಿಹಾಕಿದ್ದಾರೆ.ಈ ಪ್ರಕರಣವನ್ನು ಹೂತು ಹಾಕಲು ಮುಂಬೈ ಪೊಲೀಸರು ಬಯಸಿದ್ದಾರೆ ಎಂದು ಸುಶಾಂತ್ ಕುಟುಂಬ ಆರೋಪಿಸಿದೆ. ಬಿಹಾರ ಪೊಲೀಸರು ತನಿಖೆ ನಡೆಸಲು ಹೇಗೆ ಮುಂಬೈ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಎನ್ನುವುದು ಪ್ರತಿಯೊಬ್ಬರೂ ನೋಡುತ್ತಿದ್ದಾರೆ. ನಮ್ಮ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅವರು ಹೇಗೆಲ್ಲ ಅವಮಾನಿಸಿದ್ದಾರೆ. ಈ ಪ್ರಕರಣದಲ್ಲಿ ತನಿಖೆ ನಡೆಯಬಾರದು ಎಂಬ ಅವರ ಉದ್ದೇಶ ಸ್ಪಷ್ಟವಾಗುತ್ತದೆ. ಸಿಬಿಐ ತನಿಖೆಗೆ ಒಪ್ಪಿಸಲು ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ. ಸಿಬಿಐ ಶುದ್ಧ ತನಿಖೆ ನಡೆಸಲಿದೆ ಎಂದು ಸುಶಾಂತ್ ಸಂಬಂಧಿ ಹೇಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss