ಮುಂಬೈ: ರಿಯಾ ಚಕ್ರವರ್ತಿಯವರ ದೂರಿನ ಮೇರೆಗೆ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿಯರ ವಿರುದ್ಧ ಎಫ್ಐಆರ್ ದಾಖಲಾಗಿರುವುದು ‘ಕಾನೂನುಬಾಹಿರ ಮತ್ತು ಕೆಟ್ಟದ್ದಾಗಿದೆ’ ಎಂದು ಸಿಬಿಐ ಇಂದು ಬಾಂಬೆ ಹೈಕೋರ್ಟ್ನಲ್ಲಿ ವಿರೋಧಿಸಿದೆ.
ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿಯರು ನಕಲಿ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಪಡೆದಿದ್ದರು ಎಂಬ ರಿಯಾ ಚಕ್ರವರ್ತಿ ಆರೋಪ ಬಹುಷಃ ಊಹಾಪೋಹವಾಗಿದೆ ಎಂದು ಸಿಬಿಐ ಬಾಂಬೆ ಹೈಕೋರ್ಟ್ಗೆ ತಿಳಿಸಿದೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಮುಂಬೈ ಪೊಲೀಸರು ಅಥವಾ ರಿಯಾ ಚಕ್ರವರ್ತಿ ಅವರಿಗೆ ಯಾವುದೇ ಮಾಹಿತಿ ಇದ್ದರೆ, ಅದನ್ನು ನೇರವಾಗಿ ಸಿಬಿಐಗೆ ಹಂಚಿಕೊಳ್ಳಬೇಕು ಎಂದು ಸಂಸ್ಥೆ ಹೇಳಿದೆ, ಬಾಂದ್ರಾ ಪೊಲೀಸ್ ಠಾಣೆಯಲ್ಲಿ ನೋಂದಾಯಿತ ಎಫ್ಐಆರ್ ಅಗತ್ಯವಿಲ್ಲ ಎಂದು ಅದು ಹೈಕೋರ್ಟ್ಗೆ ತಿಳಿಸಿದೆ.
ಎಫ್ಐಆರ್ ವಜಾಗೊಳಿಸುವಂತೆ ಸುಶಾಂತ್ ಸಿಂಗ್ ರಜಪೂತ್ ಸಹೋದರಿಯರು ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ಬೆಂಬಲಿಸಿದೆ.