Monday, July 4, 2022

Latest Posts

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಬಯಲಾಯ್ತು ಆಶ್ಚರಿಯ ವಿಷಯ, ಅದು ಏನು ಗೊತ್ತಾ?

ಸುಶಾಂತ್  ಸಾವಿನ  ಪ್ರಕರಣದ ತನಿಖೆ ಚುರುಕುಗೊಂಡಿದೆ. ಈಗಾಗಲೇ  ಬಿಹಾರ  ಪೊಲೀಸರು  ಮತ್ತು  ಮುಂಬೈ  ಪೊಲೀಸರು  ತನಿಖೆ ನಡೆಸುತ್ತಿದ್ದಾರೆ.  ಪ್ರತಿಯೊಬ್ಬರು  ಅಪರಾ‘ ಪ್ರಕರಣದಲ್ಲಿ  ಪ್ರಾಥಮಿಕ  ತನಿಖೆ  ಮಾಡಲೇಬೇಕಾಗುತ್ತದೆ. ಅದೇ ರೀತಿ  ನಟ ಸುಶಾಂತ್ ಸಿಂಗ್ ರಜಪೂತ್ ಕೇಸ್‌ನಲ್ಲಿ ಆ  ಪ್ರಾಥಮಿಕ ತನಿಖೆ ಸರಿಯಾಗುತ್ತಿಲ್ಲ  ಎಂದು ಆಪಾದನೆ ಶುರುವಾಗಿದೆ.  ಮುಂಬೈ ಪೊಲೀಸರ ತನಿಖೆಯಲ್ಲಿ ಲೋಪ ಆಗಿದೆ ಎಂಬುದಕ್ಕೆ ಈಗ ಮತ್ತೊಂದು ಸಾಕ್ಷಿ ಸಿಕ್ಕಿದೆ. ಆ ಬಗ್ಗೆ ಸುಶಾಂತ್ ಪರ ವಕೀಲರು ಹೇಳಿಕೆ ನೀಡಿದ್ದಾರೆ. ಜೂ.೧೪ರಂದು ಮುಂಬೈನ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ ಶವ ಪತ್ತೆ ಆಯಿತು. ಹಾಗಾಗಿ ಮೇಲ್ನೋಟಕ್ಕೆ ಅದನ್ನು ಆತ್ಮಹತ್ಯೆ ಎಂದುಕೊಳ್ಳಲಾಗಿದೆ. ಮುಂಬೈ ಪೊಲೀಸರು ಕೂಡ ಇದನ್ನು ಆತ್ಮಹತ್ಯೆ ಎಂದೇ ಹೇಳುತ್ತ ಬಂದಿದ್ದಾರೆ. ಘಟನೆ ನಡೆದ ಕೆಲವೇ ದಿನಗಳ ಬಳಿಕ ಮರಣೋತ್ತರ ಪರೀಕ್ಷೆ ಬಂದಾಗಲೂ ಅದರಲ್ಲಿ ಕೂಡ ಸೂಸೈಡ್ ಎಂಬ ಲಕ್ಷಣಗಳೇ ಕಾಣಿಸುತ್ತಿವೆ ಎಂದು ಪೊಲೀಸರು ಹೇಳಿದರು. ಹೌದು, ಸುಶಾಂತ್ ಸಿಂಗ್ ರಜಪೂತ್ ಅವರ ಮರಣೋತ್ತರ ಪರೀಕ್ಷೆ ವರದಿಯಲ್ಲೇ ದೋಷ ಇದೆ ಎಂದು ಸುಶಾಂತ್ ಪರ ವಕೀಲರಾದ ವಿಕಾಸ್ ಸಿಂಗ್ ಆರೋಪ ಮಾಡಿದ್ದಾರೆ. ಅವರ ಹೇಳಿಕೆ ಪ್ರಕಾರ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸುಶಾಂತ್ ಸಾವಿನ ಸಮಯವನ್ನೇ ಉಲ್ಲೇಖಿಸಿಲ್ಲ! ’ಸಾವಿನ ಸಮಯ ಬರೆದಿದ್ದರೆ ಅದರಿಂದಲೇ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಗೊತ್ತಾಗುತ್ತಿತ್ತು’ ಎಂದು ವಿಕಾಸ್ ಸಿಂಗ್ ಹೇಳಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss