ರಿಯಾ ಚಕ್ರವರ್ತಿ ಇದು ಎರಡನೇ ಸಲ ಸುಶಾಂತ್ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ತಮ್ಮನ್ನ ಸುಶಾಂತ್ ಅವರ ಪ್ರೇಯಸಿ ಎಂದೇ ಪರಿಚಯಿಸಿಕೊಂಡಿದ್ದಾರೆ. ನನಗೆ ಸರ್ಕಾರದ ಮೇಲೆ ಸಂಪೂರ್ಣ ವಿಶ್ವಾಸವಿದೆ. ಸುಶಾಂತ್ ಅವರ ಪ್ರಕರಣದ ತನಿಖೆಯನ್ನು ದಯವಿಟ್ಟು ಸಿಬಿಐಗೆ ವಹಿಸಿ ಎಂದು ಕೈ ಮುಗಿದು ಕೇಳುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.ಸುಶಾಂತ್ ಈ ರೀತಿಯ ನಿರ್ಧಾರಕ್ಕೆ ಬರಲು ಕಾರಣ ಏನೆಂದು ನನಗೂ ತಿಳಿಯಬೇಕಿದೆ ಎಂದು ಅಮಿತ್ ಶಾ ಅವರಿಗೆ ಟ್ವೀಟ್ ಮಾಡಿದ್ದಾರೆ . ಇನ್ನು ರಿಯಾ ಟ್ವೀಟ್ ಮಾಡುತ್ತಿದ್ದಂತೆಯೇ ನೆಟ್ಟಿಗರು ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಒಂದು ತಿಂಗಳವರೆಗೆ ಎಲ್ಲಿದ್ದಿರಿ. ಎಲ್ಲ ಸಾಕ್ಷ್ಯಗಳನ್ನು ನಾಶ ಮಾಡಿದ ಮೇಲೆ ಐಬಿಐ ತನಿಖೆಗೆ ಒತ್ತಾಯಿಸುತ್ತಿದ್ದೀರಾ ಎಂದು ಕಮೆಂಟ್ ಮಾಡುತ್ತಿದ್ದಾರೆ ನೆಟ್ಟಿಗರು. ಸುಶಾಂತ್ ಅವರ ಸಾವಿನ ಸುದ್ದಿ ಬಹಿರಂಗವಾಗಿತ್ತಿದ್ದಂತೆಯೇ ಕರಣ್ ಜೋಹರ್, ಸಲ್ಮಾನ್ ಖಾನ್, ಆಲಿಯಾ ಭಟ್, ಸೋನಮ್ ಕಪೂರ್ ಸೇರಿದಂತೆ ರಿಯಾ ಅವರನ್ನು ನೆಟ್ಟಿಗರು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರು. ಅದೇ ಸಮಯದಲ್ಲಿ ಮಹೇಶ್ ಭಟ್ ಜೊತೆ ರಿಯಾ ತೆಗೆಸಿಕೊಂಡಿದ್ದ ಫೋಟೋಗಳನ್ನೂ ಟ್ರೋಲ್ ಮಾಡಲಾಗಿತ್ತು. ಇದಾವುದಕ್ಕೂ ರಿಯಾ ಪ್ರತಿಕ್ರಿಯಿಸಿರಲಿಲ್ಲ.