ಎಷ್ಟೆಲ್ಲಾ ವ್ಯಾಯಾಮ ಮಾಡಿದರೂ, ಚೆನ್ನಾಗಿ ತಿಂದರೂ ದಿನವಿಡೀ ಎನರ್ಜಿಯಿಂದ ಇರಲು ಆಗುವುದಿಲ್ಲ. ನಾವು ತಿನ್ನುವ ಆಹಾರದಲ್ಲಿ ನಮಗೆ ಪ್ರೋಟೀನ್, ನ್ಯೂಟ್ರಿಯಂಟ್ಸ್ ನಮ್ಮ ದೇಹಕ್ಕೆ ಸೇರುವುದಿಲ್ಲ. ಬೆಳಗ್ಗೆ ಎಲ್ಲ ಕೆಲಸಗಳನ್ನು ಮುಗಿಸಿ ಮನೆಗೆ ಕಚೇರಿಗೆ ಹೋಗುವುದರೊಳಗೆ ಸುಸ್ತಾಗುತ್ತದೆ. ಅಲ್ಲಿ ಖುಷಿಯಿಂದ ಕೆಲಸ ಮಾಡಲು ಆಗುವುದೇ ಇಲ್ಲ. ಇನ್ನು ಮನೆಗೆ ಬರುವಾಗ ನಮ್ಮ ಕಥೆ ಹೇಳಲೇ ಬಾರದು. ಅಷ್ಟೆಲ್ಲಾ ಒಳ್ಳೆ ಆಹರ ತಿಂದರೂ ನಾವೇಕೆ ಎನರ್ಜಿಯಿಂದ ಇರಲು ಆಗುವುದಿಲ್ಲ. ದಿನವಿಡೀ ಎನರ್ಜಿಗಾಗಿ ಈ ಆಹಾರಗಳನ್ನು ಸೇವಿಸಿ..
- ಬಾಳೆಹಣ್ಣು: ತಕ್ಷಣದ ಎನರ್ಜಿಗಾಗಿ ಬಾಳೆಹಣ್ಣು ಬೆಸ್ಟ್. ದಿನವೂ ಬಾಳೆಹಣ್ಣು ಸೇವಿಸಿದರೆ ಎನರ್ಜಿ ಇರುತ್ತದೆ. ಕಾರ್ಬ್ಸ್,ಪೋಟ್ಯಾಶಿಯಮ್, ವಿಟಮಿನ್ಸ್ ಎಲ್ಲವೂ ಇದರಲ್ಲಿದೆ.
- ಸಿಹಿಗೆಣಸು: ಸಿಹಿಗೆಣಸು, ಮರಗೆಣಸು ಸೀಸನಲ್ ಆದರೆ ಇದು ಎನರ್ಜಿ ನೀಡುವ ಆಹಾರ. ಕಾರ್ಬೋಹೈಡ್ರೇಟ್ಸ್. ಫೈಬರ್. ಮ್ಯಾಂಗನೀಸ್ ಹಾಗೂ ವಿಟಮಿನ್ ಕೂಡ ಇದರಲ್ಲಿದೆ.
- ಕಾಫಿ: ಕಾಫಿ ಕುಡಿದರೆ ಕೆಲವರಿಗೆ ಬೇಗ ಎನರ್ಜಿ ಬರುತ್ತದೆ. ಎನರ್ಜಿ ಕಡಿಮೆಯಾಯ್ತು ಎನ್ನುವಾಗ ಕೆಲಸವರು ಕಾಫಿ ಕುಡಿಯಲು ಹೋಗುತ್ತಾರೆ.ಎಪಿನೆಫ್ರೀನ್ ಎನ್ನುವ ಹಾರ್ಮೋನ್ ಕೆಫೀನ್ ಸೇವನೆಯಿಂದ ರಿಲೀಸ್ ಆಗುತ್ತದೆ. ಇದು ಎನರ್ಜಿಗೆ ಒಳ್ಳೆಯದು.
- ಮೊಟ್ಟೆ: ಪ್ರತಿದಿನವೂ ತಿಂಡಿ ಜೊತೆ ಒಂದು ಮೊಟೆ ಸೇವಿಸಬೇಕು. ನಮ್ಮಲ್ಲಿ ಈ ಅಭ್ಯಾಸ ಇಲ್ಲದಿದ್ದರೂ ಇದನ್ನು ರೂಢಿಸಿಕೊಂಡರೆ ಒಳ್ಳೆಯದು. ತುಂಬಾ ಪ್ರೋಟೀನ್ ಇದರಲ್ಲಿ ಇರುವುದರಿಂದ ದಿನ ಚೆನ್ನಾಗಿ ಹೋಗುತ್ತದೆ. ವಿಟಮಿನ್ ಕೂಡ ಇದರಲ್ಲಿ ಇರುವುದರಿಂದ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.
- ಸೇಬು: ಕಾರ್ಬೋಹೈಡ್ರೇಟ್ಸ್ ಹಾಗೂ ಫೈಬರ್ ಇರುವ ಆಹಾರ ಸೇಬು. ಮೀಡಿಯಂ ಸೈಜ್ ಇರುವ ಸೇಬು ದಿನವೂ ಒಂದರಂತೆ ಸೇವಿಸಿದರೆ ನಮ್ಮ ಆರೋಗ್ಯದಲ್ಲಾಗುವ ಬದಲಾವಣೆ ಕಾಣುತ್ತದೆ. ಇದು ಸುಸ್ತಾಗದಂತೆ ತಡೆಗಟ್ಟುತ್ತದೆ. ಇದರಲ್ಲಿರುವ ಫೈಬರ್ ನಮ್ಮ ಚರ್ಮಕ್ಕೂ ಒಳ್ಳೆಯದು.
- ಡಾರ್ಕ್ ಚಾಕೋಲೆಟ್: ಬ್ಯಾಗ್ನಲ್ಲಿ ಒಂದು ಡಾರ್ಕ್ ಚಾಕೋಲೆಟ್ ಇಟ್ಟುಕೊಳ್ಳಿ. ದೇಹದಲ್ಲಿ ಏನು ಇಲ್ಲ, ಸುಸ್ತಾಗುತ್ತಿದೆ ಎನಿಸುವಾಗ ಎನರ್ಜಿಗಾಗಿ ಅದನ್ನು ತಿನ್ನಿ. ಮಾಮೂಲಿ ಚಾಕೋಲೆಟ್ನಂತೆ ಡಾರ್ಕ್ ಚಾಕೋಲೆಟ್ ಅಲ್ಲ, ಇದು ಆರೋಗ್ಯಕ್ಕೂ ಒಳ್ಳೆಯದು. ಕೊಕೊವಾ ದಿಂದ ನಮ್ಮ ಮೂಡ್ ಚೆನ್ನಾಗಿ ಆಗುತ್ತದೆ.