Sunday, June 26, 2022

Latest Posts

ಸೂಪರ್ ಸ್ಪೀಡ್ ಕೊರೋನಾ: ಇಂಗ್ಲೆಂಡ್‍ನಿಂದ ಬಂದವರ ಮೇಲೆ ವಿಶೇಷ ನಿಗಾಕ್ಕೆ ಜಿಲ್ಲಾಡಳಿತ ಕ್ರಮ

ಹೊಸ ದಿಗಂತ ವರದಿ, ಕೊಪ್ಪಳ:

ಇಂಗ್ಲೆಂಡ್‍ನಲ್ಲಿ ಎರಡನೇ ಅವದಿಗೆ ರೂಪಾಂತರಗೊಂಡ ಕೊರೋನಾ ಅಟ್ಟಹಾಸದ ಆತಂಕ ಈಗ ಮತ್ತೆ ಎಲ್ಲಡೆ ವ್ಯಾಪಿಸುತ್ತಿದ್ದು, ಜಿಲ್ಲೆಗೆ ಇದುವರೆಗೂ ಯಾರೊಬ್ಬರೂ ಬಂದಿಲ್ಲ. ಎನ್ನುವುದೇ ಸಮಾಧಾನದ ಸಂಗತಿಯಾದರೆ ಇದರ ಕುರಿತು ಜಿಲ್ಲಾಡಳಿತ ವಿಷೇಶ ನೀಗಾ ಈರಿಸಲಾಗಿದೆ ಎಂದು ನೋಡಲ್ ಅಧಿಕಾರಿ ಹರೀಶ್ ಜೋಗಿ ತಿಳಿಸಿದರು.
ಈಗಾಗಲೇ ದೇಶ ವಿದೇಶದಲ್ಲಿ ಕೊರೋನಾ ತನ್ನ ಅಟ್ಟಹಾಸ ಮೆರೆದು ರುದ್ರನರ್ತನ ತಾಂಡವ ಮಾಡಿ ಎಲ್ಲರನ್ನು ತಲ್ಲಣ ಗೊಳಿಸಿ ಈಗ ಮತ್ತೆ ಎರಡನೇ ಅವದಿಗೆ ರೂಪಾಂತರೊಂಡು ಮತ್ತೆ ತನ್ನ ಅಟ್ಟಹಾಸ ಮೆರೆಯಲು ಸಜ್ಜಾಗಿ ನಿಂತಿದೆ.
ಈ ಕುರಿತು ಜಿಲ್ಲಾಡಳಿತ ಮುನ್ನಚ್ಚರಿಕಾ ಕ್ರಮವನ್ನು ತೆಗೆದುಕೊಂಡಿದ್ದು, ನ.25ರಿಂದ ಡಿಸೆಂಬರ್ 23 ರವೆಗೂ ಇಂಗ್ಲೇಂಡಿನಿಂದ ಕೊಪ್ಪಳ ಜಿಲ್ಲೆಗೆ ಯಾರಾದರೂ ಬಂದಿದ್ದಾರಾ ಎನ್ನುವ ಮಾಹಿತಿಯನ್ನು ವಿದೇಶಿಗರ ಪ್ರವಾಸ ನೋಂದಣಿ ಇಲಾಖೆಯ ಬೆಂಗಳೂರಿನಿಂದ ಕೊಪ್ಪಳ ಜಿಲ್ಲಾಡಳಿತ ಮಾಹಿತಿಯನ್ನು ಪಡೆದಿದ್ದು, ಅಂಥಹ ಯಾರೋಬ್ಬರೂ ಬಂದಿಲ್ಲ ಎನ್ನುವ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ಇರುವ ಪ್ರವಾಸಿ ತಾಣಗಳಿಗೆ ಹಾಗೂ ಜಿಲ್ಲೆಯವರು ಇಂಗ್ಲೇಂಡ್‍ನಲ್ಲಿ ತಂಗಿರುವವರು ಈ ಅವದಿಯಲ್ಲಿ ಯಾರಾದರೂ ಬಂದಿದ್ದಾರೆಯೇ ಎದ್ದಿರುವ ಮಾಹಿತಿಗೆ ಸದ್ಯಕ್ಕಂತೂ ಯಾರು ಬರದೇ ಇರುವುದು ನೀರಾಳವಾಗಿದೆ.
ಕೊಪ್ಪಳ ಜಿಲ್ಲೆಯ ಅನೇಕರು ಇಂಗ್ಲೇಂಡಿನಲ್ಲಿ ನಾನಾ ಕಾರಣಗಳಿಗಾಗಿ ಇದ್ದಾರೆ ಕೆಲವರು ಅಭ್ಯಾಸಕ್ಕೆ ಹೋಗಿದ್ದಾರೆ ಇನ್ನೂ ಕೆಲವರು ಉದ್ಯೋಗ ಅರಸಿ ಹೊದವರು ಇದ್ದಾರೆ. ಅವರ್ಯಾರು ಇದುವರೆಗೂ ಈ ಅವದಿಯಲ್ಲಿ ಜಿಲ್ಲೆಗೆ ಬಂದ ಮಾಹಿತಿ ಇಲ್ಲವಾಗಿದೆ.
ಕೊಪ್ಪಳ ಜಿಲ್ಲಾಡಳಿತ ಈ ರೂಪಾಂತರಗೊಂಡ ಕೊರೋನಾ ವೈರಸ್ ಬಗ್ಗೆ ಎಚ್ಚರಿಕೆಯನ್ನು ವಹಿಸಿದ್ದು, ವಿಶೇಷವಾಗಿ ಇಂಗ್ಲೆಂಡಿನಿಂದ ಬಂದವರ ಮೇಲೆ ನೀಗಾ ಇಡಲಾಗಿದೆ. ಆದ್ದರಿಂದ ಸಾರ್ವಜನಿಕರು ಇಂಗ್ಲೆಂಡಿನಿಂದ ಬಂದವರ ಬಗ್ಗೆ ಮಾಹಿತಿ ಗೊತ್ತಾದರೆ ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ಕೊರಲಾಗಿದೆ. ಇದಕ್ಕಾಗಿ ನೋಡಲ್ ಅಧಿಕಾರಿಯಾಗಿ ಹರೀಶ್ ಜೋಗಿಯವರನ್ನು ನಿಯೋಜನೆ ಮಾಡಲಾಗಿದೆ. ಆದ್ದರಿಂದ ಸಾರ್ವಜನಿಕರು ಯಾರಾದರೂ ಇಂಗ್ಲೆಂಡ್‍ನಿಂದ ಬಂದಿದ್ದಾರೆ ಎಂದು ಗೊತ್ತಾದ ತಕ್ಷಣ 99035129484 ಮತ್ತು 08539-225001ನಂಬರಿಗೆ ಸಂಪರ್ಕಿಸಿ ಮಾಹಿತಿ ತಿಳಿಸಬೇಕು ಎಂದು ಕೊರಿದ್ದಾರೆ.
ಈ ಕುರಿತು ಜಿಲ್ಲಾಡಳಿತ ಈಗಾಗಲೇ ಹೈಲರ್ಟ್ ಆಗಿದೆ. ಈ ಕುರಿತು ಮಾಹಿತಿಯನ್ನು ಸಂಗ್ರಹ ಮಾಡುತ್ತಿದೆ. ಸಂಬಂದಪಟ್ಟ ಇಲಾಖೆ ಮತ್ತು ಕಚೇರಿಗಳಿಗೆ ಪತ್ರವನ್ನು ರವಾನೆ ಮಾಡಿ ಮಾಹಿತಿ ಸಂಗ್ರಹ ಮಾಡುತ್ತಿದೆ. ಅಲ್ಲದೆ ನಿತ್ಯವೂ ಈ ಮಾಹಿತಿಯನ್ನು ಅಪ್‍ಡೇಟ್ ಮಾಡಲಾಗಿದೆ ಎಂದರು.
ನೋಡಲ್ ಅಧಿಕಾರಿ ಹರೀಶ್ ಜೋಗಿ ಮಾತನಾಡಿ, ಇಂಗ್ಲೆಂಡ್‍ನಿಂದ ಕೊಪ್ಪಳ ಜಿಲ್ಲೆಗೆ ಯಾರು ಬಂದಿಲ್ಲ ಇದರ ಕುರಿತು ಎಚ್ಚರ ವಹಿಸಲಾಗಿದ್ದು, ಇದುವರೆಗೂ ಇಂಗ್ಲೆಂಡ್ ಮಾಹಿತಿ ಇಲ್ಲ. ಆದರೂ ಸಾರ್ವಜನಿಕರು ಈ ಬಗ್ಗೆ ಮಾಹಿತಿ ಇದ್ದರೆ ತಕ್ಷಣಕ್ಕೆ ಗಮನಕ್ಕೆ ತರಬೇಕು ಎಂದು ಮನವಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss