ಹೊಸ ದಿಗಂತ ವರದಿ, ತುಮಕೂರು:
ತುಮಕೂರು ಜಿಲ್ಲೆಯ ಜನತೆಗೆ ರೂಪಾಂತರಗೊಂಡ ಬ್ರಿಟನ್ ಕೊರೋನಾ ವೈರಸ್ ಭಯಬೇಡ ಎಂದು ಡಿ.ಹೆಚ್.ಓ. ಡಾ.ನಾಗೇಂದ್ರಪ್ಪ ಅವರು ಅಭಯನೀಡಿದ್ದಾರೆ.
ಯುಕೆಯಿಂದ ತುಮಕೂರು ಜಿಲ್ಲೆಗೆ ಬಂದಿದ್ದ ಐವರೂ ಮಹಿಳೆಯರ ವರದಿ ನೆಗೆಟಿವ್ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಈ ಐವರಲ್ಲಿ ತುಮಕೂರಿನ ಮರಳೂರು ದಿಣ್ಣೆಯ ನಾಲ್ವರು ಮತ್ತು ತಿಪಟೂರಿನ ಒಬ್ಬರು ಇದ್ದು.ಮಂಗಳವಾರ ಅವರು ಜಿಲ್ಲೆಗೆ ಬಂದ ಕೂಡಲೆ ಅವರ ಗಂಟಲು ದ್ರವ ಸಂಗ್ರಹಿಸಿ ಕೊರೊನ ಪರೀಕ್ಷೆಗೆ ಕಳುಹಿಸಿ ಅವರನ್ನು ಹೋಂಕ್ವಾರಂಟೈನ್ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.