Friday, July 1, 2022

Latest Posts

ಸೂಪರ್ ಸ್ಪೀಡ್ ಕೊರೋನಾ: ಬ್ರಿಟನ್ ನಿಂದ ಮೈಸೂರಿಗೆ ಬಂದ ಏಳು ಮಂದಿಗೆ ಕೊರೋನಾ ಟೆಸ್ಟ್

ಹೊಸ ದಿಗಂತ ವರದಿ, ಮೈಸೂರು:

ಇಂಗ್ಲೇoಡ್ ನಲ್ಲಿ ಕಾಣಿಸಿಕೊಂಡಿರುವ ರೂಪಾಂತರ ಕೊರೋನಾ ಇದೀಗ ಎಲ್ಲೆಡೆ ಭೀತಿಯನ್ನುಂಟು ಮಾಡಿದ್ದು, ಈ ಹಿನ್ನೆಲೆಯಲ್ಲಿ ಬ್ರಿಟನ್ ನಿಂದ ಅರಮನೆ ನಗರಿ ಮೈಸೂರಿಗೆ ಆಗಮಿಸಿರುವ ಏಳು ಮಂದಿಗೆ ಕೊರೋನಾ ಟೆಸ್ಟ್ ಗೆ ನಡೆಸಲಾಗಿದೆ.
ಬ್ರಿಟಿನ್ ನಿಂದ ಬೆಂಗಳೂರಿಗೆ ಹಿಂದಿರುಗಿದ 85 ಮಂದಿ ಪ್ರಯಾಣಿಕರ ಪೈಕಿ ಏಳು ಮಂದಿ ಮೈಸೂರಿನವರು. ಈಗಾಗಲೆ ಅಧಿಕಾರಿಗಳು ಏಳು ಮಂದಿಯ ಮೊಬೈಲ್ ನಂ, ಮನೆ ವಿಳಾಸದ ಮಾಹಿತಿಯನ್ನ ಕಲೆ ಹಾಕಿದ್ದಾರೆ. ಏಳು ಮಂದಿಯೊಡನೆ ಆರೋಗ್ಯ ಇಲಾಖೆ ಸಿಬ್ಬಂದಿ ಸಂಪರ್ಕದಲ್ಲಿದ್ದಾರೆ.
ಬ್ರಿಟನ್ ನಿಂದ ಬಂದವರಿಗೆ ಮನೆಯಲ್ಲೇ ಕ್ವಾರಂಟೈನ್ ಗೆ ಒಳಪಡುವಂತೆ ಸೂಚನೆ ನೀಡಲಾಗಿದ್ದು, ಎಲ್ಲಾ ಏಳು ಮಂದಿಗೂ ಆರೋಗ್ಯ ಇಲಾಖೆ ಸಿಬ್ಬಂದಿ ಕೊರೋನಾ ಸೋಂಕು ಪತ್ತೆ ಹಚ್ಚುವ ಆರ್ ಟಿಪಿಸಿಆರ್ ಹಾಗೂ ಆಂಟಿಜೆನ್ ಎರಡೂ ಟೆಸ್ಟ್ ಮಾಡಿದ್ದಾರೆ.
ಮೊಬೈಲ್ ಟೆಸ್ಟಿಂಗ್ ತಂಡ ಮನೆಗೆ ತೆರಳಿ ಕೊರೋನಾ ಪರೀಕ್ಷೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ನಗರ ಪಾಲಿಕೆ ಅಧಿಕಾರಿಗಳು ಆರೋಗ್ಯ ಇಲಾಖೆ ಸಂಪರ್ಕದಲ್ಲಿದ್ದು, 7 ಮಂದಿಯ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss