ಬಳ್ಳಾರಿ: ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ನಾರಾ ಸೂರ್ಯನಾರಾಯಣ ರೆಡ್ಡಿ ಅವರ ದ್ವಿತೀಯ ಸುಪುತ್ರ ನಾರಾ ಭರತ್ ರೆಡ್ಡಿ ಅವರ ವಿವಾಹ ಮಹೋತ್ಸವ ಭಾನುವಾರ ಹೊಸಪೇಟೆ ನಗರದಲ್ಲಿ ಸರಳವಾಗಿ ನೆರವೇರಿತು. ಬಿಜೆಪಿ ಮಹಿಳಾ ಘಟಕದ ರಾಜ್ಯ ಉಪಾದ್ಯಕ್ಷೆ ರಾಣಿ ಸಂಯುಕ್ತ ಅವರ ಪುತ್ರಿ ಜೊತೆಗೆ ನಾರಾ ಭರತ್ ರೆಡ್ಡಿ ಅವರ ಜೊತೆ ವಿವಾಹ ನಡೆಯಿತು.
ವಧು ತಂದೆ ಶ್ರೀನಿವಾಸ್ ಅವರು ಇತ್ತೀಚಗೆ ನಡೆದ ಎಮ್ಮೆಲ್ಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪಧಿರ್ಮಸಿದ್ದರು. ಪೂರ್ವ ನಿಯೋಜಿತ ವಿವಾಹ ಸಮಾರಂಭಕ್ಕೆ ಜಿಲ್ಲಾಡಳಿತ ಅನುಮತಿ ನೀಡಲಾಗಿತ್ತು. ಅಪಾರ ಜನರ, ಬೆಂಬಲಿಗರನ್ನು ಹೊಂದಿದ್ದ ಎರಡೂ ಕುಟುಂಬದವರ ಈ ಅದ್ಧೂರಿ ವಿವಾಹ ಸಮಾರಂಭಕ್ಕೆ ಜನರ ಸಂಖ್ಯೆ ಕಡಿಮೆಯಾಗಿದ್ದರೂ ನಾನಾ ಗಣ್ಯರು, ಶಾಸಕರು, ಸಚಿವರು ಸಾಕ್ಷಿಯಾದರು. ಕ್ರೀಡಾ ಇಲಾಖೆ ಸಚಿವ ಸಿ.ಟಿ.ರವಿ, ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಮುಖಂಡರಾದ ವೆಂಕಟೇಶ ಪ್ರಸಾದ್ ಸೇರಿದಂತೆ ನಾನಾ ಗಣ್ಯರು, ಸಚಿವರು, ಶಾಸಕ ರು ಈ ಸಮಾರಂಭಕ್ಕೆ ಸಾಕ್ಷಿಯಾದರು.