ರಿಯಲ್ ಸ್ಟಾರ್ ಉಪೇಂದ್ರ ಅವರ ಬರ್ತೇಡೆ ಹತ್ತಿರ ಬರುತ್ತಿದೆ. ಸದ್ಯ ಉಪೇಂದ್ರ ಅವರ ಎರಡು ಸಿನಿಮಾಗಳು ಪ್ರಸ್ತುತ ಬಹುವಾಗಿ ಸದ್ದು ಮಾಡುತ್ತಿವೆ. ಕಬ್ಜ ಮತ್ತು ಬುದ್ಧಿವಂತ ೨ ಸಿನಿಮಾ ಅತಿಯಾಗಿ ಕ್ರೇಜ್ ಹುಟ್ಟಿಸಿವೆ. ಎರಡೂ ಸಿನಿಮಾಗಳ ಚಿತ್ರೀಕರಣ ಬಹುತೇಕ ಅಂತ್ಯದಲ್ಲಿದ್ದು ಬಿಡುಗಡೆಗೆ ರೆಡಿಯಾಗಿದೆ.
ಇದೀಗ ಉಪೇಂದ್ರ ಅವರ ಹುಟ್ಟುಹಬ್ಬ ಸನಿಹವಾಗುತ್ತಿದ್ದು, ಬುದ್ಧಿವಂತ ೨ ಸಿನಿಮಾ ತಂಡ ಅದೇ ದಿನ ಉಪೇಂದ್ರ ಅಭಿಮಾನಿಗಳಿಗೆ ಉಡುಗೊರೆಯೊಂದನ್ನು ನೀಡಲು ಅಣಿಯಾಗಿದ್ದಾರೆ. ಸೆಪ್ಟೆಂಬರ್ ೧೮ ರಂದು ಉಪೇಂದ್ರ ಹುಟ್ಟುಹಬ್ಬವಿದ್ದು, ಅದೇ ದಿನ ಬುದ್ಧಿವಂತ ೨ ಸಿನಿಮಾದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿ‘ರ್ರಿಸಿದೆ. ಈಗಾಗಲೇ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಪೋಸ್ಟರ್ ಮೇಲೆ ಹಲವು ರೀತಿಯ ಚರ್ಚೆಗಳು ನಡೆದಿವೆ.
ಬುದ್ಧಿವಂತ ೨ ಸಿನಿಮಾ ಪೋಸ್ಟರ್ ಮ್ಯಾಡ್ಮ್ಯಾಕ್ಸ್ ರೋಡ್ ಸಿನಿಮಾದ ಪೋಸ್ಟರ್ನ ಕಾಪಿ ಎನ್ನಲಾಗುತ್ತಿದೆ. ಪೋಸ್ಟರ್ ನೋಡಿದರೆ ಇದು ನಿಜ ಎನಿಸದೇ ಇರದು. ಮ್ಯಾಡ್ಮ್ಯಾಕ್ಸ್ ಸಿನಿಮಾದ ನಾಯಕನಂತೆ ಮುಖಕ್ಕೆ ಕಬ್ಬಿಣದ ಸರಳು ಹಾಕಿಕೊಂಡು ಒಂದು ಕೈಯಲ್ಲಿ ಬಂದೂಕು ಹಿಡಿದು ನಿಂತಿದ್ದಾರೆ ಉಪೇಂದ್ರ. ಈಗಾಗಲೇ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಮೂಸಿಡಿಸಿದೆ.