Sunday, August 14, 2022

Latest Posts

ಸೆಪ್ಟೆಂಬರ್ ಅಂತ್ಯಕ್ಕೆ ಹೊಸ ಪ್ರವಾಸೋದ್ಯಮ ನೀತಿ ಜಾರಿ: ಸಚಿವ ಸಿ.ಟಿ.ರವಿ

ತುಮಕೂರು: ರಾಜ್ಯದಲ್ಲಿ ನ ಐತಿಹಾಸಿಕ ,ನೈಸರ್ಗಿಕ ಮತ್ತು ಧಾರ್ಮಿಕ ಪ್ರವಾಸಿ ತಾಣಗಳ ಅಭಿವೃದ್ಧಿಯ ಬಗ್ಗೆ ಕೇಂದ್ರ ಪ್ರವಾಸೋದ್ಯಮ ಸಚಿವರ ಜೊತೆಯಲ್ಲಿ ತಾವು ಚರ್ಚೆ ನಡೆಸಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಪ್ರವಾಸೋದ್ಯಮ, ಕನ್ನಡ ಸಂಸ್ಕೃತಿ ಸಚಿವ ಸಿ.ಟಿ.ರವಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ತಮ್ಮ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಚಿವರು, ರಾಜ್ಯದಲ್ಲಿನ ಜೈನಧರ್ಮವಿಶೇಷ ಧಾರ್ಮಿಕ ಕ್ಷೇತ್ರಗಳು, ಕರಾವಳಿ ಪ್ರದೇಶದ ಪ್ರದೇಶಗಳು, ಮೊಗಲ್ ಶಾಹಿಗಳ ದಖನ್ ಪ್ರವಾಸೋದ್ಯಮ, ನೈಸರ್ಗಿಕವಾದ ಜೋಗ್ ಜಲಪಾತದ, ಚಿತ್ರದುರ್ಗದ ಪಾಳೇಗಾರರು ಮತ್ತು ಕೋಟೆಕೊತ್ತಲಗಳ ಪ್ರವಾಸೋದ್ಯಮ ಪ್ರವಾಸಿ ಕ್ಷೇತ್ರಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅನುಧಾನಕೋರಿದ್ದು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ತುಮಕೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗಳ ವ್ಯಾಪ್ತಿಯಲ್ಲಿ 16-17,17-18ರಲ್ಲಿ ಯಾತ್ರಿನಿವಾಸಗಳ ನಿರ್ಮಾಣದ ಕಾಮಗಾರಿಗಳು ವಿಳಂಬ ವಾಗುತ್ತಿರುವಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಇದರಿಂದ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸೆಪ್ಟೆಂಬರ್ ಅಂತ್ಯಕ್ಕೆ ಹೊಸ ಪ್ರವಾಸೋದ್ಯಮ ನೀತಿ ಜಾರಿಗೆ ಬರಲಿದ್ದು. ಅಷ್ಟರಲ್ಲಿ ಅನುಧಾನಗಳನ್ನು ಸೃಷ್ಟಿಸಿಕೊಂಡರು ನಿರ್ಣಯ ಕೈಗೊಳ್ಳಬೇಕಾಗಿದೆ ಎಂದರು.

ವಿವಿಧ ಮಹಾಪುರುಷರ ಜಯಂತಿಗಳ ಅಚರಣೆಯ ಬಗ್ಗೆ ವಿಪಕ್ಷ ನಾಯಕರು ಮತ್ತು ಸಂಘಸಂಸ್ಥೆಗಳ ಸಭೆ ಕರೆದು ನಿರ್ಧಾರ ಮಾಡಲಾಗುತ್ತದೆ ಎಂದರು. ದಸರಾ ಆಚರಣೆ ಬಗ್ಗೆ ಮೈಸೂರಿನಲ್ಲಿ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. ಸಂಪ್ರದಾಯಕ್ಕೆ ಚ್ಯುತಿ ಬರದಂತೆ ಸರಳವಾಗಿ ದಸರಾ ಆಚರಿಸಲಾಗುತ್ತದೆ ಎಂದರು. ಕೇಂದ್ರ ಸರ್ಕಾರ ಖೇಲೋ ಇಂಡಿಯ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ  ಕ್ರೀಡಾಗ್ರಾಮ ಮಾಡಲು ಸಮ್ಮತಿ ನೀಡಿದ್ದು ಅದಕ್ಕೆ ತುಮಕೂರಿನಲ್ಲಿ ಜಾಗ ಹುಡುಕುವಂತೇ ಸೂಚಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss