Wednesday, August 17, 2022

Latest Posts

ಸೆಪ್ಟೆಂಬರ್ ಕೊನೆಯವೆರೆಗೂ ಚಿತ್ರಮಂದಿರ ತೆರೆಯುವಂತಿಲ್ಲ, ಮತ್ತೆ ನಿರಾಸೆಯಾದ ಸಿನಿಪ್ರಿಯರು

ಕೊರೋನಾ ವೈರೆಸ್ ನಿಂದ  ಲಾಕ್‌ಡೌನ್ ಆಗಿತ್ತು.  ಹೀಗಾಗಿ ಐದಾರು  ತಿಂಗಳಿಂದ ಚಿತ್ರಮಂದಿರ  ಬಂದ್ ಆಗಿತ್ತು.

ಇನ್ನೂ ಒಂದು ತಿಂಗಳು ತೆರೆಯುವಂತಿಲ್ಲ. ನಿನ್ನೆಯಷ್ಟೇ ಕೇಂದ್ರದಿಂದ ಅನ್‌ಲಾಕ್ ೪ ಮಾರ್ಗಸೂಚಿ ಪ್ರಕಟವಾಗಿದ್ದು, ಸೆಪ್ಟೆಂಬರ್ ಅಂತ್ಯದವರೆಗೂ ಚಿತ್ರಮಂದಿರ ತೆರೆಯದಂತೆ ಸೂಚಿಸಿದೆ. ಈ ಮೂಲಕ ಕನ್ನಡ ಕಲಾಭಿಮಾನಿಗಳು ಹಾಗೂ ಥಿಯೇಟರ್ ಮಾಲಿಕರು ನಿರಾಸೆಯಾಗಿದ್ದಾರೆ. ೧೫೦ಕ್ಕೂ ಹೆಚ್ಚು ದಿನಗಳಿಂದ ಚಿತ್ರಮಂದಿರ ಮುಚ್ಚಿರುವುದರಿಂದ ಸಹಜವಾಗಿ ಥಿಯೇಟರ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿನಿಮಾ ಬಿಡುಗಡೆ ಇಲ್ಲದೇ ನಿರ್ಮಾಪಕರು ಸಹ ಕಂಗಾಲಾಗಿದ್ದಾರೆ. ಕೆಲವು ಚಿತ್ರಗಳು ಮಾತ್ರ ಆನ್ಲೈನ್ ಬಿಡುಗಡೆ ಕಂಡಿದೆ. ಚಿತ್ರಮಂದಿರ ತೆರೆಯಲು ಅನುಮತಿ ನೀಡಿ ಎಂದು ಒತ್ತಾಯಿಸಿ ನಟ ಶಿವರಾಜ್ ಕುಮಾರ್ ನೇತೃತ್ವದ ನಿಯೋಗ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರನ್ನು ಭೇಟಿ ಮಾಡಿ ವಿನಂತಿಸಿಕೊಂಡಿತ್ತು.

ರಾಜ್ಯ ಸರ್ಕಾರ ಸಹ ಸೆಪ್ಟೆಂರ್ಬ ತಿಂಗಳಿನಿಂದ ಚಿತ್ರಮಂದಿರ ತೆರೆಯಲು ಅನುಮತಿ ನೀಡುವ ಬಗ್ಗೆ ಸಕಾರಾತ್ಮಕ ನಿರ್ಧಾರಕ್ಕೆ ಬಂದಿತ್ತು. ಆದರೆ, ಕೇಂದ್ರ ಮಾರ್ಗಸೂಚಿ ಮತ್ತೆ ನಿರಾಸೆ ಮೂಡಿಸಿದೆ. ಆರಂಭಿಕ ಹಂತದಲ್ಲಿ ಮಲ್ಟಿಫೇಕ್ಸ್ ಗಳಿಗೆ ಅವಕಾಶ ಸಿಗವ ಸಾ ಧ್ಯತೆ ಇದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಮಲ್ಟಿಫೇಕ್ಸ್ ಚಿತ್ರಮಂದಿರಕ್ಕೂ ಅನುಮತಿ ಸಿಕ್ಕಿಲ್ಲ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!