Tuesday, June 28, 2022

Latest Posts

ಸೆರಂ ಇನ್ಸ್​ಟಿಟ್ಯೂಟ್​ ನಲ್ಲಿ ಅಗ್ನಿ ಅವಘಡ: ಲಸಿಕೆ ತಯಾರಿಕೆಗೆ ಆಗಿಲ್ಲ ವಿಘ್ನ

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶೀಯ ಲಸಿಕೆ ಉತ್ಪಾದನಾ ಕೇಂದ್ರ ಪುಣೆಯ ಸೆರಂ ಇನ್ಸ್​ಟಿಟ್ಯೂಟ್​ ಆಫ್​ ಇಂಡಿಯಾದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಆದರೆ ಇದರಿಂದ ಲಸಿಕೆ ತಯಾರಿಕೆಗೆ ಅಡ್ಡಿ ಇಲ್ಲ ಎಂದು ಸೀರಮ್ ಸಂಸ್ಥೆ ತಿಳಿಸಿದೆ.
ಲಸಿಕೆ ತಯಾರಿಕಾ ಕೇಂದ್ರದಿಂದ ಅನತಿ ದೂರದಲ್ಲಿರುವ ಮಂಜ್ರಿ ಪ್ಲಾಂಟ್​ನ ಟರ್ಮಿನಲ್ ಒಂದರ ನಿರ್ಮಾಣ ಹಂತದ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹತ್ತಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯುದಲ್ಲಿ ನಿರತವಾಗಿದೆ.
ಸದ್ಯ ವಿಜ್ಞಾನಿಗಳನ್ನು ಸ್ಥಳಾಂತರ ಮಾಡಲಾಗಿದ್ದು, ಅವಘಡ ನಡೆದ ಸ್ಥಳದಿಂದ ಮೂವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಪುಣೆ ಮುನಿಸಿಪಲ್ ಆಯುಕ್ತರೊಂದಿಗೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸಂಪರ್ಕದಲ್ಲಿದ್ದು, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss