Tuesday, August 16, 2022

Latest Posts

ಸೆಸ್ಕಾಂನಿಂದ ಕೋವಿಡ್-19 ಆಸ್ಪತ್ರೆಗೆ 3 ಹಾಟ್ ವಾಟಾರ್ ಡಿಸ್‍ಪೆನ್ಸರ್ ಕೊಡುಗೆ

ಚಾಮರಾಜನಗರ: ನಗರದ ಸೆಸ್ಕಾಂ ಅಧಿಕಾರಿಗಳು ಕೊರೋನಾ ರೋಗಿಗಳ ಅನುಕೂಲಕ್ಕಾಗಿ ನಗರದ ಕೋವಿಡ್-19 ಆಸ್ಪತ್ರೆಗೆ ಮೂರು ಹಾಟ್ ವಾಟಾರ್ ಡಿಸ್‍ಪೆನ್ಸರ್‍ಗಳನ್ನು ಕೊಡುಗೆಯಾಗಿ ನೀಡಿದರು.
ಸೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್‍ರಾದ ಪೂರ್ಣಚಂದ್ರತೇಜಸ್ವಿ, ವಿಭಾಗೀಯ ಕಚೇರಿಯ ಲೆಕ್ಕಾಧಿಕಾರಿ ಭಾಸ್ಕರ್ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದ ನೌಕರರ ಸಂಘ ತಲಾ ಒಂದರಂತೆ 3 ಹಾಟ್‍ವಾಟಾರ್ ಡಿಸ್‍ಪೆನ್ಸರ್‍ಗಳನ್ನು ಕೋವಿಡ್-19 ಆಸ್ಪತ್ರೆಗೆ ಕೊಡುಗೆಯಾಗಿ ಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಕೃಷ್ಣಪ್ರಸಾದ್ ಅವರ ಮೂಲಕ ನೀಡಿದರು.
ಈ ಸಂದರ್ಭದಲ್ಲಿ ಡಾ. ಸುಮಂತ್, ಸೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪೂರ್ಣಚಂದ್ರತೇಜಸ್ವಿ, ವಿಭಾಗೀಯ ಕಚೇರಿಯ ಲೆಕ್ಕಾಧಿಕಾರಿ ಭಾಸ್ಕರ್, ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದ ನೌಕರರ ಸಂಘ ಸಂಘಟನಾ ಕಾರ್ಯದರ್ಶಿ ಎನ್.ಮಹೇಶ್, ಅಧ್ಯಕ್ಷ ಮುರಳೀಕೃಷ್ಣಸ್ವಾಮಿ, ಕಾರ್ಯದರ್ಶಿ ಸಿದ್ದರಾಜಪ್ಪ, ಖಜಾಂಚಿ ರಮೇಶ್, ಉಪಾಧ್ಯಕ್ಷ ಮಂಜುನಾಥ್, ಸಹ ಕಾರ್ಯದರ್ಶಿ ಎಸ್.ಮಹೇಶ್, ನಿರ್ದೇಶಕರಾದ ಜಾವೀದ್, ನಾಗರಾಜು, ಸಂತೋಷ್, ಚಂದ್ರನಾಯಕ ಹಾಜರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss