ತುಮಕೂರು: ತುಮಕೂರು ವಿವಿಯವರ ವಿವಿಧ ಸ್ನಾತಕೋತ್ತರ ಪದವಿ ಪರೀಕ್ಷೆಗಳು ಸೆಪ್ಟೆಂಬರ್ 1ರಿಂದ 23 ರವರೆಗೆ ನಡೆಯಲಿದೆ ಎಂದು ಪರೀಕ್ಷಾಂಗ ಕುಲಸಚಿವರು ತಿಳಿಸಿದ್ದಾರೆ.
ಮೂವತ್ತಮೂರು ಪರೀಕ್ಷಾಕೇಂದ್ರಗಳಲ್ಲಿ ಕೊವಿಡ್ ಮಾರ್ಗಸೂಚಿಗೆ ಅನುಗುಣವಾಗಿ ಪರೀಕ್ಷೆಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆಯ ಸಮಯಕ್ಕೆ ಒಂದು ಗಂಟೆ ಮುಂಚೆ ಪರೀಕ್ಷೆಯ ಕೇಂದ್ರಕ್ಕೆ ಆಗಮಿಸುವಂತೆ ಅವರು ಸೂಚಿಸಿದ್ದಾರೆ.