ಉತ್ತರಪ್ರದೇಶ: ಕೊರೋನಾ ವೈರಸ್ ನಿಂದ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದ ವಿಶ್ವ ವಿಖ್ಯಾತ ತಾಜ್ ಮಹಲ್ ಮತ್ತು ಆಗ್ರಾ ಕೋಟೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ತಾಜ್ ಮಹಾಲ್ ಮತ್ತು ಆಗ್ರಾ ಕೋಟೆಯು ಸೆ.21ರಿಂದ ಪ್ರವೇಶಕ್ಕೆ 5000 ಮತ್ತು 2500 ಪ್ರವಾಸಿಗರಗೆ ಅನುಮತಿ ನೀಡಿದ್ದು, ಎಲೆಕ್ಟ್ರಾನಿಕ್ ಟಿಕೆಟ್ ಗಳನ್ನು ನೀಡಲಾಗುವುದು.
ಮಾರ್ಚ್ ನಲ್ಲಿ ಕೊರೋನಾ ಲಾಕ್ ಡೌನ್ ಹಿನ್ನಲೆ ಸ್ಮಾರಕಗಳಿಗೆ ಪ್ರವಾಸಿಗರ ಪ್ರವೇಶವನ್ನು ಸ್ಥಗಿತಗೊಳಿಸಲಾಗಿತ್ತು.
ಉತ್ತರಪ್ರದೇಶದಲ್ಲಿ 61,625 ಸಕ್ರಿಯ ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.