ಬೆಂಗಳೂರು: ಸೆಪ್ಟೆಂಬರ್ 25 ರಂದು ಕರ್ನಾಟಕ ಬಂದ್ ಇಲ್ಲ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ರೈತ ಮುಖಂಡ ಕರಬೂರು ಶಾಂತಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಸೆ.೨೫ ರಂದು ಕರ್ನಾಟಕ ಬಂದ್ ಇಲ್ಲ. ರಾಷ್ಟ್ರೀಯ ಹೆದ್ದಾರಿಗಳನ್ನು ಮಾತ್ರ ಬಂದ್ ಮಾಡಲಾಗುವುದು. ಸರ್ಕಾರದ ಮುಂದಿನ ನಡೆಯನ್ನು ನೋಡಿ ಕೊಂಡು ಮುಂದಿನ ನಿರ್ದಾರ ಕೈ ಗೊಳ್ಳಲಾಗುವುದು. ಸದ್ಯಕ್ಕೆ ಬಂದಿಲ್ಲ ಎಂದು ಸ್ಪಷ್ಟನೆ ನಡೆಸಿದ್ದಾರೆ.