ಜೈಪುರ: ಕೊರೋನಾದಿಂದಾಗಿ ಬಾಗಿಲು ಹಾಕಿದ್ದ ಎಲ್ಲ ಧಾರ್ಮಿಕ ಕ್ಷೇತ್ರಗಳಲ್ಲಿ ಇದೀಗ ಮತ್ತೆ ಬೆಳಕು ಕಂಡಿದೆ.
ಸೆ.7 ರಿಂದ ಎಲ್ಲ ಧಾರ್ಮಿಕ ಕ್ಷೇತ್ರಗಳು ಬಾಗಿಲು ತೆರೆಯಲಿದ್ದು, ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ ಎಂದು ರಾಜಸ್ಥಾನ ಸರ್ಕಾರ ಹೇಳಿದೆ.
ಕೊರೋನಾ ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ. ದೇವಾಲಯಕ್ಕೆ ಬರುವವರಿಗೆ ಮಾಸ್ಟ್ ಕಡ್ಡಾಯವಾಗಿದೆ. ಈಗಾಗಲೇ ಜೂನ್ ಎಂಟರಿಂದ ಎಲ್ಲ ದೇವಾಲಯಗಳನ್ನು ತೆಗೆಯಲಿ ಅನುಮತಿ ಇದ್ದು, ಕೊರೋನಾ ತಡೆಗಟ್ಟಲು ದೇವಾಲಯಗಳನ್ನು ತೆರೆಯಲಾಗಿರಲಿಲ್ಲ. ಇದೀಗ ಧಾರ್ಮಿಕ ಕ್ಷೇತ್ರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.