ಸೇನಾ ಕೋಟೆಗೂ ಲಗ್ಗೆಯಿಟ್ಟ ಕೊರೋನಾ: ವೈದ್ಯರು, ಜ್ಯೂನಿಯರ್ ಕಮಿಷನ್ ಅಧಿಕಾರಿಯಲ್ಲಿ‌ ಸೋಂಕು ಪತ್ತೆ

0
100

ಹೊಸದಿಲ್ಲಿ: ದೇಶಾದ್ಯಂತ ಮಹಾಮಾರಿ ಕೊರೋನಾ ವೈರಸ್ ನಿಂದ ಸಾವಿರಾರು ಮಂದಿ ಸೋಂಕಿತರಾಗಿದ್ದಾರೆ. ಇದೀಗ ಸೇನೆಯ ಕರ್ನಲ್ ಶ್ರೇಣಿಯ ವೈದ್ಯರಿಗೆ ಮತ್ತು ಜ್ಯೂನಿಯರ್ ಕಮಿಷನ್ ಅಧಿಕಾರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

52 ವರ್ಷದ ಸೇನಾ ಅಧಿಕಾರಿ ಇತ್ತೀಚೆಗೆ ದೆಹಲಿಯಿಂದ ಕೋಲ್ಕತಾಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಇದೀಗ ಅವರಿಗೆ ಕೋಲ್ಕತಾದ ಆರ್ಮಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಭಾರತೀಯ ಸೇನೆಯ ಡೆಹ್ರಾಡೂನ್ ಮೂಲದ ಜ್ಯೂನಿಯರ್ ಕಮಿಷನ್ ಅಧಿಕಾರಿಗೂ ಕೊರೋನಾ ಸೋಂಕು ಇರುವುದು ಪತ್ತೆಯಾಗಿದ್ದು, ಇವರಿಬ್ಬರ ಜೊತೆ ಸಂಪರ್ಕ ಹೊಂದಿದವರನ್ನು ಗುರುತಿಸಿ ಅವರನ್ನೂ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.

ಡೆಹ್ರಾಡೂನ್ ನ ಜ್ಯೂನಿಯರ್ ಕಮಿಷನ್ ಅಧಿಕಾರಿ ಇತ್ತೀಚೆಗಷ್ಟೇ ದೆಹಲಿಯ ಆರ್ಮಿ ಕಚೇರಿಗೆ ಭೇಟಿ ನೀಡಿದ್ದರು ಎಂದು ವರದಿ ತಿಳಿಸಿದೆ. ಹಾಗಾಗಿ ನಾವು ಇನ್ನೆಷ್ಟು ಮಂದಿಗೆ ಸೋಂಕು ತಗುಲಿರಬಹುದೆಂದು ಪತ್ತೆ ಹಚ್ಚಲಾಗುತ್ತದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here