Sunday, July 3, 2022

Latest Posts

ಸೇನೆಗೆ ಬಲ ತುಂಬಿದ ಸ್ವದೇಶಿ 9mm ಮೆಷಿನ್ ಪಿಸ್ತೂಲ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಡಿಆರ್​ಡಿಒ (Defence Research and Development Organisation) ಇದೀಗ ಮೊದಲ ಬಾರಿಗೆ ದೇಶಿಯವಾಗಿ 9mm ಮೆಷಿನ್ ಪಿಸ್ತೂಲ್ ಅಭಿವೃದ್ಧಿ ಮಾಡಿದೆ. ಡಿಆರ್​ಡಿಒ ಮತ್ತು ಇಂಡಿಯನ್ ಆರ್ಮಿ ನೇತ್ವದಲ್ಲಿ ಮೆಷಿನ್ ಪಿಸ್ತೂಲ್​ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಮೆಷಿನ್ ಪಿಸ್ತೂಲ್​ನಿಂದ 9 mm ಮದ್ದುಗುಂಡುಗಳನ್ನ ಫೈರ್ ಮಾಡಬಹುದು. ನೂತನ ಈ ಪಿಸ್ತೂಲ್​ಗೆ ಅಸ್ಮಿ (Asmi) ಅಂತಾ ಹೆಸರನ್ನು ಇಡಲಾಗಿದೆ.
ಇನ್ನು ಈ ಒಂದು ಮೆಷಿನ್​​ ಪಿಸ್ತೂಲ್​​​ ತಯಾರಿಕೆಗೆ 50 ಸಾವಿರ ಮಾತ್ರ ತಗಲುತ್ತದೆ. ಸೆಲ್ಫ್​ ಲೋಡಿಂಗ್ ವರ್ಷನ್ ಇದಾಗಿದ್ದು, ಸಂಪೂರ್ಣ ಅಟೋಮ್ಯಾಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ 3 ಡಿ ಪ್ರಿಂಟಿಂಗ್ ಟೆಕ್ನಾಲಜಿಯನ್ನ ಬಳಸಿಕೊಂಡು ಪಿಸ್ತೂಲ್ ಅಭಿವೃದ್ಧಿ ಮಾಡಲಾಗಿದೆ. ಸುಲಭವಾಗಿ ಒಂದು ಸ್ಥಳದಿಂದ ಮತ್ತೊಂದು ಕಡೆಗೆ ಕೊಂಡೊಯ್ಯಬಹುದಾಗಿದೆ.
ಪ್ರಧಾನಿ ಮೋದಿ ಅವರ ಆತ್ಮ ನಿರ್ಭರ ಸಂಕಲ್ಪದಡಿ ನಿರ್ಮಾಣವಾಗಿರುವ ಈ ಪಿಸ್ತೂಲ್​ ಅನ್ನು ಸಂಪೂರ್ಣವಾಗಿ ದೇಶಿಯ ಮೆಟಿರಿಯಲ್​ ಬಳಸಿಕೊಂಡು ನಿರ್ಮಾಣ ಮಾಡಲಾಗಿದೆ. ಅಸ್ಮಿ ಎಂದು ನಾಮಕರಣ ಮಾಡಲಾಗಿದ್ದು, ಅಂದ್ರೆ ‘ಹೆಮ್ಮೆಯ’, ‘ಸ್ವಾಭಿಮಾನಿ’ ಮತ್ತು ‘ಕಠಿಣ ಪರಿಶ್ರಮ’ (‘Pride’, ‘Self-Respect’ & ‘Hard Work) ಅಂತಾ ಡಿಆರ್​ಡಿಒ ಬಣ್ಣಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss