Sunday, June 26, 2022

Latest Posts

ಸೇವಾಭಾರತಿ ಮಧ್ಯೆ ಪ್ರವೇಶ: ನೇಕಾರರ ಮೊಗದಲ್ಲೀಗ ನಗು!

ಬೆಳಗಾವಿ: ನಗರದ ವಡಗಾಂವ್, ಶಹಾಪುರ ಪ್ರದೇಶಗಳ ವಿದ್ಯುತ್ ಆಧಾರಿತ ನೇಕಾರರ ಪಾಲಿಗೀಗ ಸೇವಾ ಭಾರತಿ ಆಪದ್ಬಾಂಧವ ಲಾಕ್‌ಡೌನ್‌ನಿಂದಾಗಿ ತೀರಾ ಸಂಕಷ್ಟದಲ್ಲಿದ್ದ ಸುಮಾರು ಹತ್ತು ಸಾವಿರ ನೇಕಾರರಿಗೆ ಸೇವಾಭಾರತಿ ಜೀವದಾನ ಮಾಡಿದೆ. ಹೇಗೆಂದರೆ ನೇಕಾರರ ಗೋದಾಮಲ್ಲಿ ಧೂಳು ತಿನ್ನುತ್ತಿದ್ದ ಸುಮಾರು ೫ ಲಕ್ಷ ಸೀರೆಗಳು ಮಾರಾಟಕ್ಕೆ ಸೇವಾ ಭಾರತಿ ‘ಶಹಾಪುರ ಸೀರಿಗೆಳು’ ಹೆಸರಲ್ಲಿ ಪ್ರದರ್ಶನ ಆಯೋಜಿಸಿದೆ. ಆನ್‌ಲೈನ್ ಮೂಲಕವೂ ಸೀರೆಗಳ ಮಾರಾಟಕ್ಕೆ ವ್ಯವಸ್ಥೆ ಮಾಡಿದೆ. ಸೀರೆಗಳ ಪ್ರದರ್ಶನ ಜೂ. ೨೨ರಿಂದ ಶುರುವಾಗಿದ್ದು, ಜೂ. ೨೮ರ ವರೆಗೆ ನಡೆಯಲಿದೆ.
ಪ್ರತೀ ತಿಂಗಳು ಈ ನೇಕಾರರು ಕಡಿಮೆಯೆಂದರೆ ೨ ಲಕ್ಷಗಳಷ್ಟು ಸೀರೆಗಳನ್ನು ನೇಯುತ್ತಾರೆ. ಇವು ಕೇರಳ, ತಮಿಳ್ನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮಾರುಕಟ್ಟೆಗಳಿಗೆ ವಾರಕ್ಕೊಮ್ಮೆ ಏಜೆಂಟರ ಮುಖಾಂತರ ಪೂರೈಕೆಯಾಗುತ್ತಿತ್ತು. ಮೇಲಾಗಿ ಸಾಕಷ್ಟು ಪ್ರಮಾಣದ ಸೀರೆಗಳು ರಫ್ತಾಗುತ್ತಿತ್ತು. ಆದರೆ ಕೊರೋನಾ- ಲಾಕ್‌ಡೌನ್ ಇವೆಲ್ಲಕ್ಕೂ ತಣ್ಣೀರೆರಚಿತು.
ಪರಿಣಾಮ, ಕಳೆದ ಮಾರ್ಚ್‌ನಿಂದ ನೇಕಾರರಿಗೆ ಹಿಂದಿನ ಆರ್ಡರ್‌ಗಳಿಗೆ ಪ್ರತಿಯಾಗಿ ದುಡ್ಡು ಪಾವತಿಯಾಗಿಲ್ಲ, ಹೊಸ ಆರ್ಡರ್‌ಗಳೂ ಬಂದಿಲ್ಲ. ಈ ಮಧ್ಯೆ ಕಷ್ಟಪಟ್ಟು ನೇಯ್ದು ಲಕ್ಷಗಟ್ಟಲೆ ಬೆಲೆಬಾಳುವ ಸೀರೆಗಳು ಗೋದಾಮಿನಲ್ಲಿ ಧೂಳು ತಿನ್ನುವ ಸ್ಥಿತಿಯಲ್ಲಿತ್ತು.
ನೇಕಾರರ ಸಮಸ್ಯೆಯರಿತ ಸೇವಾ ಭಾರತಿ ಸೀರೆಗಳ ಪ್ರದರ್ಶನವನ್ನು ಆಯೋಜಿಸುವ ಮೂಲಕ ಆತಂಕಿತ ನೇಕಾರರಿಗೆ ನಿಜಕ್ಕೂ ಜೀವದಾನ ಮಾಡಿದೆ. ಪ್ರದರ್ಶನದಲ್ಲೀಗ ಸಾಕಷ್ಟು ಸೀರೆಗಳು ವಿಕ್ರಯವಾಗುವ ಮೂಲಕ ನೇಕಾರರ ಮೊಗದಲ್ಲಿ ನಗು ಮೂಡ ತೊಡಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss