Monday, August 15, 2022

Latest Posts

ಸೈಕ್ಲೋಥಾನ್- 2021ಕ್ಕೆ ಸಚಿವ ಆನಂದ ಸಿಂಗ್ ಚಾಲನೆ

ದಿಗಂತ ವರದಿ,ಬಳ್ಳಾರಿ:

ನವೋಲ್ಲಸದ ಜೀವನ ನಮ್ಮೆಲ್ಲರದ್ದಾಗಬೇಕು ಮತ್ತು ಹೊಸ ವರ್ಷ ಎಲ್ಲರಿಗೂ ಶುಭ ತರಬೇಕೆನ್ನವ ಸಂಕಲ್ಪದೊಂದಿಗೆ ಸಚಿವ ಆನಂದ ಸಿಂಗ್ ಅವರು, ಹೊಸಪೇಟೆ ನಗರದಲ್ಲಿ ಸೈಕ್ಲೋಥಾನ್ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿದರು.‌

ಜೈನ್ ಇಂಟರ್ನ್ಯಾಷನಲ್ ಟ್ರೆಡ್ ಆರ್ಗನೈಸೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನ್ಯೂ ಲೈಫ್ ನ್ಯೂ ಡಿಸ್ಟ್ರಿಕ್ ಸೆಲೆಬ್ರೆಷನ್ ಹೆಸರಲ್ಲಿ ನಡೆದ ಸೈಕ್ಲೋಥಾನ್ ಕಾರ್ಯಕ್ರಮಕ್ಕೆ ಸಚಿವ ಆನಂದ ಸಿಂಗ್ ಅವರು, ಸೈಕಲ್ ತುಳಿಯುವ ಮೂಲಕ ಚಾಲನೆ ನೀಡಿ ಗಮನಸೆಳೆದರು, ಭಾನುವಾರ ಬೆಳ್ಳಂ ಬೆಳಿಗ್ಗೆ ಸೈಕಲ್ ಮೂಲಕ ನಗರದಲ್ಲಿ ಬರುತ್ತಿದ್ದಂತೆಯೇ ನೂರಾರು ಕುತೂಹಲದಿಂದ ವೀಕ್ಷಿಸಿ ಬೆಂಬಲಿಸಿದರು.‌ ನಂತರ ಮಾತನಾಡಿದ ಅವರು, ಸೈಕಲ್ ತುಳಿಯೋದ್ರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಅಲ್ಲದೇ ಪ್ರತಿಯೊಬ್ಬರು ಯೋಗ ಮತ್ತು ವ್ಯಾಯಾಮವನ್ನು ಪ್ರತಿನಿತ್ಯ ಮಾಡೋ ಮೂಲಕ ಆರೋಗ್ಯ ಕಾಪಾಡುವದರ ಜೊತೆಗೆ ದೇಹವನ್ನು ಸದೃಢವಾಗಿಟ್ಟು ಕೊಳ್ಳಬಹುದು ಎಂದರು.

ಈ ವೇಳೆ ಇಂದ್ರ ಕುಮಾರ ಜೈನ್, ಹಿತೈಷ್ ಬಾಗರೇಚ್, ಮಹೇಂದ್ರ ಜೈನ್ ಸೇರಿದಂತೆ ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss